232 ಮಿಲಿಯನ್ ಡಾಲರ್ ಮೌಲ್ಯದ ಕೊಕೇನ್ ವಶ: ಮೂವರ ಬಂಧನ

Update: 2021-10-18 18:32 GMT

ಲಿಸ್ಬನ್, ಅ.18: ಪೋರ್ಚುಗಲ್ನ ಬಳಿ ಅಟ್ಲಾಂಟಿಕ್ ಸಾಗರದಲ್ಲಿ ದೋಣಿಯೊಂದರಲ್ಲಿ ಸಾಗಿಸುತ್ತಿದ್ದ 232 ಮಿಲಿಯನ್ ಮೌಲ್ಯದ ಕೊಕೇನ್ ಅನ್ನು ಅಂತರಾಷ್ಟ್ರೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದ್ದು, 3 ಮಂದಿಯನ್ನು ಬಂಧಿಸಿ ಪೋರ್ಚುುಗಲ್ಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೋರ್ಚುಗಲ್ ಮತ್ತು ಸ್ಪೇನ್ನ ಪೊಲೀಸರು, ಅಮೆರಿಕದ ಮಾದಕವಸ್ತು ನಿಗ್ರಹ ದಳ ಮತ್ತು ಬ್ರಿಟನ್ನ ರಾಷ್ಟ್ರೀಯ ಅಪರಾಧ ಪತ್ತೆದಳ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.


79 ಅಡಿ ಉದ್ದದ ಹಾಯಿದೋಣಿಯಲ್ಲಿ ಕೊಕೇನ್ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದೋಣಿಯನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಕೇನ್ ತುಂಬಿಸಿದ್ದ 183 ಪೆಟ್ಟಿಗೆ ಪತ್ತೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯುರೋಪ್ನಲ್ಲಿ ವಶಕ್ಕೆ ಪಡೆಯಲಾದ ಬೃಹತ್ ಮೌಲ್ಯದ ಮಾದಕವಸ್ತು ಇದಾಗಿದ್ದು ಇಬೇರಿಯನ್ ದ್ವೀಪದ ಮೂಲಕ ಯುರೋಪ್ಗೆ ಸಾಗಿಸಲಾಗುತ್ತಿತ್ತು. ಅಂತರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಾಣೆದಾರರ ಜಾಲಕ್ಕೆ ಸೇರಿದ ಸರಕು ಇದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News