×
Ad

ನಿರ್ಮಾಣ ಹಂತದ ಕಟ್ಟಡದ ಸಂಪ್‍ಗೆ ಬಿದ್ದ 14 ವರ್ಷದ ಬಾಲಕ ಸಾವು

Update: 2021-10-19 20:45 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.19: ನಿರ್ಮಾಣ ಹಂತದ ಕಟ್ಟಡದ ಸಂಪ್‍ಗೆ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಗರದ ಕೆಜಿ ಹಳ್ಳಿಯಲ್ಲಿ ನಡೆದಿದೆ. 
ಮೃತಪಟ್ಟ ಬಾಲಕನನ್ನು ಚಂದ್ರು(14) ಎಂದು ಗುರುತಿಸಲಾಗಿದೆ.

ನಗರದಲ್ಲಿನ ಸತತ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟಡದ ಗ್ರೌಂಡ್ ಫ್ಲೋರ್‍ನಲ್ಲಿದ್ದ ಸಂಪ್‍ನಲ್ಲಿ ನೀರು ನಿಂತಿತ್ತು. ಕಟ್ಟಡದ ಮುಂದೆ ಆಟದ ಮೈದಾನದಲ್ಲಿ ಆಡುತ್ತಿದ್ದ ವೇಳೆ ಚೆಂಡು ಕಟ್ಟಡದ ಒಳಗೆ ಹೋಗಿತ್ತು. ಚೆಂಡು ತರಲು ಹೋಗಿದ್ದ ಇಬ್ಬರು ಮಕ್ಕಳಲ್ಲಿ ಆಯತಪ್ಪಿ ಚಂದ್ರು ಸಂಪ್ ನೊಳಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನೊಂದು ಮಗುವಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಂಬೇಡ್ಕರ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News