ಟಿ-20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಯಾವುದು ?

Update: 2021-10-21 04:16 GMT

ಹೊಸದಿಲ್ಲಿ : ಐಸಿಸಿ ಪುರಷರ ಟಿ-20 ವಿಶ್ವಕಪ್ ಸೂಪರ್ 12 ಹಂತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಯಾವ ತಂಡ ಈ ಬಾರಿ ವಿಶ್ವಕಪ್ ಗೆಲ್ಲಬಹುದು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಹೆಚ್ಚುತ್ತಿದೆ. ವಿಶ್ವಾದ್ಯಂತ ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ವ್ಯಕ್ತಪಡಿಸುತ್ತಿದ್ದಾರೆ.

ವೆಸ್ಟ್‌ಇಂಡೀಸ್ ಮಾಜಿ ವೇಗದ ಬೌಲರ್ ಹಾಗೂ ಖ್ಯಾತ ವೀಕ್ಷಕ ವಿವರಣೆಕಾರ ಇಯಾನ್ ಬಿಷಪ್ ಅವರ ಪ್ರಕಾರ ಇಂಗ್ಲೆಂಡ್, ಭಾರತ, ನ್ಯೂಝಿಲೆಂಡ್, ಪಾಕಿಸ್ತಾನ ಹಾಗೂ ವೆಸ್ಟ್‌ ಇಂಡೀಸ್ ನಡುವೆ ಕಪ್‌ಗೆ ಪೈಪೋಟಿ ಇದೆ. "ನಾವು ವಾಸ್ತವಿಕವಾಗಿ ಯೋಚಿಸಬೇಕು. ಕಪ್‌ಗೆ ಸಾಕಷ್ಟು ಮಂದಿ ಸ್ಪರ್ಧಿಗಳಿದ್ದಾರೆ" ಎಂದು ಇಯಾನ್ ಬಿಷಪ್ ಹೇಳಿದರು.

ಮಾಜಿ ವೇಗದ ಬೌಲರ್ ಪ್ರಮುಖ ಐದು ತಂಡಗಳ ಬಲ ಮತ್ತು ದೌರ್ಬಲ್ಯಗಳನ್ನು ಕೂಡಾ ವಿಶ್ಲೇಷಿಸಿದ್ದಾರೆ. "ಇಂಗ್ಲೆಂಡ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಬ್ಯಾಟ್ಸ್‌ಮನ್‌ಗಳಿದ್ದಾರೆ. ಭಾರತದ ಬ್ಯಾಟಿಂಗ್ ಕ್ರಮಾಂಕ ಸ್ಟಾರ್‌ಗಳಿಂದಲೇ ತುಂಬಿದೆ. ನ್ಯೂಝಿಲೆಂಡ್ ಬ್ಯಾಟ್ಸ್‌ಮನ್‌ಗಳು ಲೀಲಾಜಾಲವಾಗಿ ಬೌಂಡರಿ ಗಳಿಸುವ ಜತೆಗೆ ಅಪಾಯಕಾರಿ ಬೌಲಿಂಗ್ ದಾಳಿಯನ್ನೂ ಹೊಂದಿದೆ. ಪಾಕಿಸ್ತಾನ ಬೌಲಿಂಗ್‌ನಲ್ಲಿ ಅಪಾಯಕಾರಿ" ಎನ್ನುವುದು ಅವರ ಅಭಿಮತ.

"ಆದರೆ ವೆಸ್ಟ್‌ಇಂಡೀಸ್‌ಗೆ ಸಾಕಷ್ಟು ಅನುಭವ ಇದೆ. ಆದ್ದರಿಂದ ಅವರು ಕೂಡಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸವಿದೆ". ಇದಕ್ಕೆ ಸಮರ್ಥನೆಯಾಗಿ ಕಳೆದ ವಿಶ್ವಕಪ್‌ ನಲ್ಲಿ ಬೆನ್ ಸ್ಟ್ರೋಕ್ ಅವರ ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿ ಕಪ್ ಗೆಲ್ಲಲು ನೆರವಾದ ಕಾರ್ಲೋಸ್ ಬ್ರೆತ್‌ವೈಟ್ ಅವರ ಉದಾಹರಣೆಯನ್ನು ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News