ಬೆಂಗಳೂರು; ಸುರಕ್ಷತೆಗೆ ನಗರದಲ್ಲಿ 7 ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

Update: 2021-10-21 18:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.21:  ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಮೇಲೆ ನಿಗಾವಹಿಸಲು ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ, ಬರೋಬ್ಬರಿ 7 ಸಾವಿರಕ್ಕಿಂತ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರನ್ನು ಮಹಿಳೆಯರು ಮತ್ತು ಮಕ್ಕಳ ಸುರಕ್ಷಿತ ನಗರವಾಗಿಸಲು 3,000ಕ್ಕೂ ಹೆಚ್ಚು ಸ್ಥಳಗಳಿಂದ ನೇರ ಪ್ರಸಾರ ಒದಗಿಸುವ 7 ಸಾವಿರ ಕ್ಕಿಂತಲೂ ಹೆಚ್ಚು ವೀಡಿಯೋ ಕ್ಯಾಮೆರಾಗಳನ್ನು ಅಳವಡಿಸುವ ಕ್ರಮ ಸಾಗುತ್ತಿದೆ.

ಇದರಲ್ಲಿ ವಿನೂತನ ಡಯಲ್, 100 ಅಪ್ಲಿಕೇಶನ್ ಮತ್ತು ಡ್ರೋನ್‍ಗಳನ್ನು ಒಳಗೊಂಡಂತೆ ಸುಧಾರಿತ ವೀಡಿಯೋ ವಿಶ್ಲೇಷಣೆಯನ್ನು ಹೊಂದಿದೆ. ಒಟ್ಟಾರೆ, ಇದಕ್ಕಾಗಿ 496 ಕೋಟಿಗಳ ವೆಚ್ಚದಲ್ಲಿ ಬೆಂಗಳೂರು ಸುರಕ್ಷಿತ ನಗರ ಯೋಜನೆ ರೂಪಿಸಲಾಗುತ್ತಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಮತ್ತು ಹನಿವೆಲ್ ಆಟೊಮೇಷನ್ ಇಂಡಿಯಾ ಜಾರಿಗೊಳಿಸಿದ ನಿರ್ಭಯಾ ಯೋಜನೆಯಡಿಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಿಂದ ಈ ವೆಚ್ಚವನ್ನು ಭರಿಸಲಾಗುತ್ತಿದೆ. 

ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಗರದಾದ್ಯಂತ 7,000 ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲು ಮೊದಲ ಎರಡು ವರ್ಷಗಳು ಬೇಕಾಗಿದೆ. ಈ ಯೋಜನೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸುವುದು ಮುಂತಾದ ಸಮಸ್ಯೆಗಳನ್ನು ಖಾಸಗಿ ಕಂಪನಿ ನೋಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ಸೌಮೆಂದು ಮುಖರ್ಜಿ ಮಾತನಾಡಿ, ಮುಂದಿನ ನವೆಂಬರ್‍ ನಿಂದ ಕೆಲಸ ಆರಂಭವಾಗಲಿದ್ದು, ಮೈದಾನದಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸುವ ಕ್ರಮ ಆರು ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಸುಮಾರು 3,500 ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಮತ್ತು ಎರಡನೇ ಹಂತದಲ್ಲಿ ಉಳಿದಿದೆ ಎಂದರು.

ಯೋಜನೆ ಜವಾಬ್ದಾರಿ ಹೊತ್ತಿರುವ ಹನಿವೆಲ್ ಇಂಡಿಯಾ ಅಧ್ಯಕ್ಷ ಆಶಿಶ್ ಗಾಯಕ್ವಾಡ್ ಈ ಬಗ್ಗೆ ಮಾತನಾಡಿ, ಅಪರಾಧ ಪ್ರಕರಣಗಳನ್ನು ಸುಧಾರಿಸಲು ನಾವು ಪೊಲಿಸ್ ಇಲಾಖೆಯ ಅಸ್ತಿತ್ವದಲ್ಲಿರುವ ಸುರಕ್ಷಾ ಆ್ಯಪ್ ಅನ್ನು ಕೂಡ ಅಪ್‍ಡೇಟ್ ಮಾಡುತ್ತೇವೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News