×
Ad

ಆನೇಕಲ್ ನಲ್ಲಿ ಯುವಕರಿಬ್ಬರ ಬರ್ಬರ ಹತ್ಯೆ

Update: 2021-10-22 11:23 IST

ಆನೇಕಲ್, ಅ.22: ಯುವಕರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲುಗಳನ್ನು ಹಾಕಿ ಕೊಲೆಗೈದ ಘಟನೆ ತಾಲೂಕಿನ ಅತ್ತಿಬೆಲೆ ಸಮಿಪದ ಟಿವಿಎಸ್ ರಸ್ತೆಯಲ್ಲಿ ಕಳೆದ ರಾತ್ರಿ ನಡೆದಿರುವುದು ವರದಿಯಾಗಿದೆ.

ಕೊಲೆಯಾದವರನ್ನು ಅತ್ತಿಬೆಲೆ ನಿವಾಸಿ ದೀಪಕ್ ಹಾಗೂ ಮಾಯಸಂದ್ರ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ.

ಹಣಕಾಸಿನ ವ್ಯವಹಾರದ ಹಿನ್ನಲೆಯಲ್ಲಿ ಈ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News