ಬೆಂಗಳೂರಿನ ರೈಲುಗಳ ಸಂಚಾರದಲ್ಲ್ಲಿ ವ್ಯತ್ಯಯ

Update: 2021-10-23 17:34 GMT

ಬೆಂಗಳೂರು, ಅ.23: ಬೆಂಗಳೂರು ನಗರದ ನಾಯಂಡಹಳ್ಳಿ ಯಾರ್ಡ್‍ನಲ್ಲಿ ಥಿಕ್ ವೆಬ್ ಸ್ವಿಚ್‍ಗಳ ಕೆಲಸದ ಅಳವಡಿಕೆ ಕಾರ್ಯಕ್ಕಾಗಿ ಲೈನ್ ಬ್ಲಾಕ್ ತೆಗೆದುಕೊಂಡು ಕೆಳಗಿನ ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ನ.2ರಂದು ಮತ್ತು ನ.11ರಂದು ಮೈಸೂರಿನಿಂದ ಚಲಿಸುವ ಮೈಸೂರು-ಕೆಎಸ್‍ಆರ್ ಬೆಂಗಳೂರು ಮೆಮು ರೈಲು ಸೇವೆಯನ್ನು ರದ್ದುಗೊಳಿಸಲಾಗುತ್ತದೆ. ಹಾಗೆಯೇ, ನ.3ರಂದು ಮತ್ತು ನ.12ರಂದು ಕೆಎಸ್‍ಆರ್ ಬೆಂಗಳೂರಿನಿಂದ ಚಲಿಸುವ ಕೆಎಸ್‍ಆರ್ ಬೆಂಗಳೂರು- ಮೈಸೂರು ಮೆಮು ರೈಲನ್ನು ರದ್ದುಗೊಳಿಸಲಾಗುತ್ತದೆ.

ಅಲ್ಲದೇ, ಇಂದಿನಿಂದ ಅ.27ರವರೆಗೆ ದ್ವಿ-ಪಥ ಕಾಮಗಾರಿಯ ಕಾರ್ಯಾರಂಭಕ್ಕೆ ಸಂಬಂಧಪಟ್ಟಂತೆ ಭಟ್ಟನಗರ (ಪೂರ್ವ ರೈಲ್ವೆ) ಮತ್ತು ಬಾಲ್ಟಿಕುರಿ (ಆಗ್ನೇಯ ರೈಲ್ವೆ) ನಿಲ್ದಾಣದಲ್ಲಿ ಪೂರ್-ಇಂಟರ್‍ಲಾಕಿಂಗ್ ಮತ್ತು ನಾನ್-ಇಂಟರ್‍ಲಾಕಿಂಗ್ ಕೆಲಸದ ನಿಮಿತ್ತ ರೈಲುಗಳು ಹೌರಾ, ಅಂಡುಲ್, ಖರಗ್‍ಪುರದ ಮೂಲಕ ಚಲಿಸಲಿವೆ.

ಅ.24, 25, ಮತ್ತು ಅ.26ರಂದು ಗುವಾಹಟಿದಿಂದ ಹೊರಡುವ ಗುವಾಹಟಿ-ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್  ವಿಶೇಷ ರೈಲು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‍ಪುರ ಮಾರ್ಗವಾಗಿ ಚಲಿಸಲಿದೆ.

ಅ.25ರಂದು ಮುಜಪ್ಪರಪುರದಿಂದ ಹೊರಡುವ ಮುಜಪ್ಪರಪುರ-ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‍ಪುರ ಮಾರ್ಗವಾಗಿ ಚಲಿಸಲಿದೆ.

ಅ.27 ರಂದು ಭಾಗಲಪುರದಿಂದ ಹೊರಡುವ ಭಾಗಲಪುರ-ಯಶವಂತಪುರ ಎಕ್ಸ್‍ಪ್ರೆಸ್ ವಿಶೇಷ ರೈಲು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‍ಪುರ ಮಾರ್ಗವಾಗಿ ಚಲಿಸಲಿದೆ.

ರೈಲು ಅ.26ರಂದು ಅಗರ್ತಲಾದಿಂದ ಹೊರಡುವ ಅಗರ್ತಲಾ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‍ಪ್ರೆಸ್ ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‍ಪುರ ಮಾರ್ಗವಾಗಿ ಚಲಿಸಲಿದೆ.

ಅ.26ರಂದು ಕೆ.ಎಸ್.ಆರ್ ಬೆಂಗಳೂರಿನಿಂದ ಹೊರಡುವ ಕೆ.ಎಸ್.ಆರ್ ಬೆಂಗಳೂರು-ನ್ಯೂ ಟಿನ್ಸುಕಿಯಾ ವಿಶೇಷ ಎಕ್ಸ್‍ಪ್ರೆಸ್ ರೈಲು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಖರಗ್‍ಪುರ, ಆಂದುಲ್, ಹೌರಾ ಮಾರ್ಗ ಮೂಲಕ ಚಲಿಸಲಿದೆ.

ಅ.26ರಂದು ಬೆಂಗಳೂರು ಕಂಟೋನ್ಮೆಂಟ್‍ನಿಂದ ಹೊರಡುವ ಬೆಂಗಳೂರು ಕಂಟೋನ್ಮೆಂಟ್- ಅಗರ್ತಲಾ ವಿಶೇಷ ಎಕ್ಸ್‍ಪ್ರೆಸ್ ರೈಲು ದನಕುಣಿಯಲ್ಲಿ ನಿಲುಗಡೆಯೊಂದಿಗೆ ಖರಗ್‍ಪುರ, ಆಂದುಲ್, ಹೌರಾ ಮಾರ್ಗ ಮೂಲಕ ಚಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News