ಸತತ ಐದನೇ ದಿನ ಪೆಟ್ರೋಲ್,ಡೀಸೆಲ್ ಬೆಲೆಯಲ್ಲಿ ಹೆಚ್ಚಳ

Update: 2021-10-24 06:44 GMT

ಹೊಸದಿಲ್ಲಿ: ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆಯನ್ನು ರವಿವಾರ ಸತತ ಐದನೇ ದಿನವೂ ಹೆಚ್ಚಿಸಲಾಗಿದೆ.

ಭಾರತೀಯ ತೈಲ ನಿಗಮದ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 35 ಪೈಸೆ ಏರಿಕೆಯಾಗಿದ್ದು ಲೀಟರ್‌ಗೆ ರೂ. 107.24 ರಿಂದ ರೂ. 107.59 ಕ್ಕೆ ತಲುಪಿದೆ. ಡೀಸೆಲ್ ದರವು 35 ಪೈಸೆ ಏರಿಕೆಯಾಗಿದೆ. ಲೀಟರ್‌ಗೆ ರೂ. 95.97 ರಿಂದ ರೂ. 96.32 ಕ್ಕೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 34 ಪೈಸೆ ಹೆಚ್ಚಿಸಿ ರೂ. 113.46 ಕ್ಕೆ ಹೆಚ್ಚಿಸಲಾಗಿದೆ ಹಾಗೂ  ಡೀಸೆಲ್ ಅನ್ನು 38 ಪೈಸೆ ಹೆಚ್ಚಿಸಲಾಗಿದ್ದು ಪ್ರತಿ ಲೀಟರ್‌ಗೆ ರೂ. 104.38 ಕ್ಕೆ ಮಾರಾಟ ಮಾಡಲಾಗುತ್ತಿದೆ.

ಇಂಧನ ದರಗಳು ನಾಲ್ಕು ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕವಾಗಿದೆ ಎಂದು ಸರಕಾರಿ ತೈಲ ಸಂಸ್ಕರಣಾಗಾರ ತಿಳಿಸಿದೆ. ಮೌಲ್ಯವರ್ಧಿತ ತೆರಿಗೆಯಿಂದಾಗಿ ಇಂಧನ ದರಗಳು ರಾಜ್ಯದಾದ್ಯಂತ ಬದಲಾಗುತ್ತವೆ.

ಕೋಲ್ಕತಾದಲ್ಲಿ ಪೆಟ್ರೋಲ್ ಲೀಟರ್ ಗೆ ರೂ.108.11 ಇದ್ದು ಡೀಸೆಲ್ ಬೆಲೆ 99.43 ರೂ.ಗೆ ತಲುಪಿದ್ದು, 100ರ ಗಡಿ ಸಮೀಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News