ಪಾಕ್ ಗೆಲುವಿನ ವಾಟ್ಸ್ಆ್ಯಪ್ ಪೋಸ್ಟ್ : ಆಗ್ರಾ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಅಮಾನತು

Update: 2021-10-27 11:18 GMT

ಶ್ರೀನಗರ: ಟ್ವೆಂಟಿ-20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಜಯಗಳಿಸಿದ ನಂತರ ಪಾಕಿಸ್ತಾನದ ಆಟಗಾರರನ್ನು ಹೊಗಳಿ ವಾಟ್ಸ್ ಆ್ಯಪ್ ಸ್ಟೇಟಸ್ ಪೋಸ್ಟ್ ಮಾಡಿದ ಆರೋಪದಲ್ಲಿ ಜಮ್ಮು- ಕಾಶ್ಮೀರದ ಮೂವರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಆಗ್ರಾದ ಎಂಜಿನಿಯರಿಂಗ್ ಕಾಲೇಜು ಅಮಾನತುಗೊಳಿಸಿದೆ.

ವಿದ್ಯಾರ್ಥಿಗಳಾದ  ಅರ್ಷೀದ್ ಯೂಸೆಫ್, ಇನಾಯತ್ ಅಲ್ತಾಫ್ ಶೇಖ್, ಶೌಕತ್ ಅಹ್ಮದ್ ಗನೈ  ಬಿಚ್ಪುರಿಯಲ್ಲಿರುವ ರಾಜಾ ಬಲ್ವಂತ್ ಸಿಂಗ್ ಎಂಜಿನಿಯರಿಂಗ್ ತಾಂತ್ರಿಕ ಕ್ಯಾಂಪಸ್ ನಲ್ಲಿ ಇದ್ದರು. ಪಾಕಿಸ್ತಾನದ ಪರವಾಗಿ ಸ್ಟೇಟಸ್ ಪೋಸ್ಟ್ ಮಾಡುವ ವಿದ್ಯಾರ್ಥಿಗಳ ಕ್ರಮವನ್ನು ಕಾಲೇಜು ಹಾಸ್ಟೆಲ್ "ಅಶಿಸ್ತಿನ ಕೃತ್ಯ" ಎಂದು ಹೇಳಿದೆ.

ಆದ್ದರಿಂದ ಹಾಸ್ಟೆಲ್ ಶಿಸ್ತು ಸಮಿತಿಯು ಈ ಮೂವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ಹಾಸ್ಟೆಲ್ ಡೀನ್ ಡಾ. ದುಶ್ಯಂತ್ ಸಿಂಗ್ ಅವರ ಅಮಾನತು ನೋಟಿಸ್ ನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಯುವ ಘಟಕದ ಸ್ಥಳೀಯ ಮುಖಂಡರು ಕಾಶ್ಮೀರದ ವಿದ್ಯಾರ್ಥಿಗಳ ವಿರುದ್ಧ ಜಗದೀಶ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಸೋಮವಾರ ಅಮಾನತುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News