ಲಂಚ ಆರೋಪ:ಸಮೀರ್ ವಾಂಖೆಡೆ ವಿಚಾರಣೆ ನಡೆಸಿದ ಎನ್ ಸಿಬಿಯ ಜಾಗೃತ ದಳ

Update: 2021-10-27 17:50 GMT

ಹೊಸದಿಲ್ಲಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ(ಎನ್ ಸಿಬಿ) ವಲಯ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧದ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಅವರನ್ನು ವಿಚಾರಣೆ ನಡೆಸಲಾಗಿದ್ದು, ಡ್ರಗ್ಸ್ ವಿರೋಧಿ ಸಂಸ್ಥೆ ಆಂತರಿಕವಾಗಿ ತನಿಖೆ ನಡೆಸುತ್ತಿದೆ.

 ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿರುವ ಕ್ರೂಸ್ ಶಿಪ್ ದಾಳಿ ಪ್ರಕರಣದ ಉಸ್ತುವಾರಿಯನ್ನು ವಹಿಸಿರುವ ಸಮೀರ್  ವಿರುದ್ಧ ಗಣನೀಯ ಮಾಹಿತಿ ಕಂಡುಬರದಿದ್ದಲ್ಲಿ ಅವರು ತನಿಖಾಧಿಕಾರಿಯಾಗಿ ಮುಂದುವರಿಯಲಿದ್ದಾರೆ  ಎಂದು ಹಿರಿಯ ಎನ್‌ಸಿಬಿ ಅಧಿಕಾರಿ ಜ್ಞಾನೇಶ್ವರ್ ಸಿಂಗ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಸಾಕ್ಷಿಯಾಗಿ ಹೆಸರಿಸಲಾದ ವ್ಯಕ್ತಿಯೊಬ್ಬರು ಈ ವಾರದ ಆರಂಭದಲ್ಲಿ  ವಾಂಖೆಡೆ ವಿರುದ್ಧ ಲಂಚದ ಆರೋಪಗಳನ್ನು ಮಾಡಿದ್ದರು. ಸಮೀರ್ ಅವರು  ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರಿಂದ ಸುಲಿಗೆಯಿಂದ ಹಿಡಿದು ಅಕ್ರಮ ಫೋನ್ ಟ್ಯಾಪಿಂಗ್ ಹಾಗೂ  ನಕಲಿ ದಾಖಲೆಗಳ ಮೂಲಕ ಪರಿಶಿಷ್ಟ ಜಾತಿಗಳ ಕೋಟಾವನ್ನು ಮೂಲೆಗುಂಪು ಮಾಡುವವರೆಗೆ ಸರಣಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

"ವಾಂಖೆಡೆ ಅವರು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದಾರೆ ಮತ್ತು ಅಗತ್ಯವಿದ್ದರೆ, ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು' ಎಂದು ಹಿರಿಯ ಎನ್‌ಸಿಬಿ ಅಧಿಕಾರಿ ಜ್ಞಾನೇಶ್ವರ್ ಸಿಂಗ್  ಹೇಳಿದರು.

ಆರ್ಯನ್ ಖಾನ್ ಜೊತೆಗಿನ ಸೆಲ್ಫಿ ವೈರಲ್ ಆದ ಖಾಸಗಿ ತನಿಖಾಧಿಕಾರಿ ಕೆ.ಪಿ. ಗೋಸಾವಿ ಅವರ ಅಂಗರಕ್ಷಕ ಪ್ರಭಾಕರ್ ಸೈಲ್ ಲಂಚದ ಆರೋಪ ಮಾಡಿದ ಬಳಿಕ  ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ತನ್ನ ವಿಜಿಲೆನ್ಸ್ ವಿಭಾಗವನ್ನು ಕೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News