ಎನ್ ಸಿಬಿಯ 'ಸ್ವತಂತ್ರ ಸಾಕ್ಷಿ', ಖಾಸಗಿ ತನಿಖಾಧಿಕಾರಿ ಕಿರಣ್ ಗೋಸಾವಿ ಬಂಧನ

Update: 2021-10-28 04:37 GMT
photo: ANI

ಹೊಸದಿಲ್ಲಿ: ಮುಂಬೈ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಏಜೆನ್ಸಿಯ(ಎನ್ ಸಿಬಿ) ವಿವಾದಾತ್ಮಕ "ಸ್ವತಂತ್ರ ಸಾಕ್ಷಿ"  ಕಿರಣ್  ಗೋಸಾವಿಯನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಕೆಲ ಸಮಯದಿಂದ ತಲೆ ಮರೆಸಿಕೊಂಡಿದ್ದಗೋಸಾವಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಪೊಲೀಸ್ ಠಾಣೆಯಲ್ಲಿ ಶರಣಾಗುವುದಾಗಿ ಹೇಳಿಕೊಂಡ ಮೂರು ದಿನಗಳ ನಂತರ ಆತನನ್ನು ಬಂಧಿಸಲಾಗಿದೆ ಎಂದು NDTV ವರದಿ ಮಾಡಿದೆ.

2018 ರಲ್ಲಿ ವಂಚನೆ ಪ್ರಕರಣದಲ್ಲಿ ಲುಕ್‌ಔಟ್ ನೋಟಿಸ್ ಎದುರಿಸುತ್ತಿರುವ  ಕಿರಣ್ ಗೋಸಾವಿ, ಮಹಾರಾಷ್ಟ್ರದಲ್ಲಿ ತನಗೆ "ಬೆದರಿಕೆ" ಇದ್ದು,  ಉತ್ತರ ಪ್ರದೇಶ ಪೊಲೀಸರಿಗೆ ಶರಣಾಗಲು ಬಯಸುತ್ತೇನೆ ಎಂದು ಹೇಳಿದ್ದ. ಲಕ್ನೋ ಪೊಲೀಸರು ನಂತರ  ಗೋಸಾವಿಗೆ ಶರಣಾಗಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದರು.

ಖಾಸಗಿ ತನಿಖಾಧಿಕಾರಿ ಗೋಸಾವಿ  ಈ ತಿಂಗಳ ಆರಂಭದಲ್ಲಿ ಕ್ರೂಸ್ ಹಡಗು ದಾಳಿಯ ಸಮಯದಲ್ಲಿ ಹಾಜರಿದ್ದ ಹಾಗೂ  ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಥವಾ ಎನ್ಸಿಬಿ ಕಚೇರಿಯಲ್ಲಿ ಆರ್ಯನ್ ಖಾನ್ ಅವರೊಂದಿಗೆ ಹಾಜರಿದ್ದ. ಎರಡೂ ಸ್ಥಳಗಳಲ್ಲಿ ಆರ್ಯನ್ ಖಾನ್ ಅವರೊಂದಿಗಿನ ಗೋಸಾವಿ ಸೆಲ್ಫಿ ಮತ್ತು ವೀಡಿಯೊಗಳು ವೈರಲ್ ಆಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News