ತನ್ನ ವಿರುದ್ಧದ ತನಿಖೆಯನ್ನು ಮಹಾರಾಷ್ಟ್ರದಿಂದ ಕೇಂದ್ರ ತನಿಖಾ ಸಂಸ್ಥೆಗಳಿಗೆ ವಹಿಸಿ: ಹೈಕೋರ್ಟ್‌ ಗೆ ಸಮೀರ್‌ ವಾಂಖೆಡೆ

Update: 2021-10-28 12:42 GMT

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮುಂಬೈ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಗುರುವಾರ ಬಾಂಬೆ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ತನ್ನ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ಕೋರಿದ್ದಾರೆ. 

"ನನ್ನ ಮೇಲೆ ವೈಯಕ್ತಿಕ ದಾಳಿಯಾಗುತ್ತಿದೆ. ಅವರು ನನ್ನನ್ನು ಬಂಧಿಸುತ್ತಾರೆ ಎಂಬ ಆತಂಕವಿದೆ. ಯಾವುದೇ ಬಲವಂತ ಕ್ರಮದ ವಿರುದ್ಧ ನನಗೆ ಮಧ್ಯಂತರ ರಕ್ಷಣೆ ಬೇಕು" ಎಂದು ವಾಂಖೆಡೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಕೈಗೊಂಡಿರುವ ತನಿಖೆಯನ್ನು ಯಾವುದೇ ಕೇಂದ್ರ ಏಜೆನ್ಸಿ ಅಥವಾ ಸಿಬಿಐಗೆ ವರ್ಗಾಯಿಸುವಂತೆಯೂ ಅವರು ಕೇಳಿಕೊಂಡಿದ್ದಾರೆ.

ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ ಸಮೀರ್ ವಾಂಖೆಡೆ ಅವರ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧ ದಾಖಲಾಗಿದ್ದರೆ 72 ಗಂಟೆಗಳ ಪೂರ್ವ ಸೂಚನೆ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರದ ವಕೀಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News