×
Ad

ಬೆಂಗಳೂರಿನಲ್ಲಿ ನಕಲಿ ಪೊಲೀಸ್ ಬಂಧನ

Update: 2021-11-03 22:14 IST

ಬೆಂಗಳೂರು, ನ.3: ನಾನು ಪೊಲೀಸ್ ನನಗೆ ಮಾಮೂಲು ಕೊಡಬೇಕು ಎಂದು ಹೇಳಿ ಸಾವಿರಾರು ರೂ. ಸುಲಿಗೆ ಮಾಡಿದ ಆರೋಪದಡಿ ನಕಲಿ ಪೊಲೀಸ್‍ನನ್ನು ಇಲ್ಲಿನ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಉತ್ತರ ತಾಲೂಕಿನ ಲಕ್ಷ್ಮೀನಾರಾಯಣ(60) ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಬೈಲಕೋನೆನಾಹಳ್ಳಿ ಗ್ರಾಮದ ನಿಖಿಲ್ ಹಾಗೂ ಇತರೆ ಅಂಗಡಿಯವರಿಂದ ಆರೋಪಿ ಲಕ್ಷ್ಮೀನಾರಾಯಣ ಹಣ ವಸೂಲಿ ಮಾಡಿದ್ದ. ಇದರಿಂದ ಅನುಮಾನಗೊಂಡು ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟಿದ್ದರು. ಮಾಹಿತಿ ಆಧಾರದ ಮೇಲೆ ಸದ್ಯ ಲಕ್ಷ್ಮೀನಾರಾಯಣನನ್ನು ಬಂಧಿಸಲಾಗಿದೆ. 

ಬಂಧಿತನಿಂದ 5 ಸಾವಿರ ರೂಪಾಯಿ ನಗದು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News