×
Ad

ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

Update: 2021-11-05 21:53 IST

ಬೆಂಗಳೂರು: ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಪರಿಸರಸ್ನೇಹಿ ಮಣ್ಣಿನ ದೀಪಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಬಿಡುಗಡೆ ಮಾಡಿದರು. 

ದೀಪಾವಳಿಯ ಅಂಗವಾಗಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾಕ್ಕೆ ತೆರಳಿ, ಗ್ರಾಮೀಣ ಮಹಿಳೆಯರು ತಯಾರಿಸಿರುವ ಈ ದೀಪಗಳನ್ನು ಕೊಟ್ಟು, ಶುಭಾಶಯ ಕೋರಿದರು. 

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು `ಹೆಣ್ಣು ಮಕ್ಕಳು ತಯಾರಿಸಿರುವ ಈ ಪರಿಸರಸ್ನೇಹಿ ದೀಪಗಳು ದೀಪಾವಳಿಯ ಅರ್ಥ ಮತ್ತು ಸಂಭ್ರಮವನ್ನು ಹೆಚ್ಚಿಸುವಂತಿವೆ. ಮಹಿಳೆಯರ ಬದುಕಿನ ಘನತೆಯನ್ನು ಹೆಚ್ಚಿಸುವಂತಹ ಇಂತಹ ಉಪಕ್ರಮಗಳು ನಮ್ಮ ಆಚರಣೆಗಳಿಗೆ ಹೊಸ ನೆಲೆಯನ್ನು ತಂದುಕೊಡುವಂತಿವೆ’ ಎಂದು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News