ಬೆಂಗಳೂರು: 180 ರೌಡಿ ಶೀಟರ್‌, ಡ್ರಗ್ಸ್ ಪೆಡ್ಲರ್‌ ಮನೆಗಳ ಮೇಲೆ ಪೊಲೀಸ್ ದಾಳಿ

Update: 2021-11-07 05:40 GMT
ಸಾಂದರ್ಭಿಕ ಚಿತ್ರ (source: PTI)

ಬೆಂಗಳೂರು, ನ.7: ನಗರದಲ್ಲಿಂದು ಬೆಳಗ್ಗೆ ರೌಡಿ ಶೀಟರ್, ಡ್ರಗ್ ಪೆಡ್ಲರ್ ಗಳ ಮನೆಗಳ ಮೇಲೆ ನಗರ ಪೊಲೀಸರು ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ.

ಸುಮಾರು 180 ರೌಡಿ ಶೀಟರ್‌ಗಳು, ಡ್ರಗ್ಸ್ ಪೆಡ್ಲರ್‌ ಗಳ ಮನೆಗಳ ಮೇಲೆ ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ದಾಳಿ ಮಾಡಿ ಶೋಧ ನಡೆಸಿದ್ದಾರೆ.

ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ಗಳು, ಡ್ರಗ್ಸ್ ಪೆಡ್ಲರ್‌ಗಳ ಮನೆಗಳ ಮೇಲೆ ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ 600 ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಬೆಂಗಳೂರಿನ ಕಾಟನ್‌ಪೇಟೆ, ಚಾಮರಾಜಪೇಟೆ ಠಾಣೆ, ಬ್ಯಾಟರಾಯನಪುರ, ಜೆ.ಜೆ. ನಗರ, ಕೆ.ಪಿ.ಅಗ್ರಹಾರ ಠಾಣೆ, ಮಾಗಡಿ ರೋಡ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ದಾಳಿ ನಡೆದಿದೆ. 123 ರೌಡಿಗಳು, ಡ್ರಗ್ಸ್ ಪೆಡ್ಲರ್ಸ್ ಠಾಣೆಗೆ ಕರೆತಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News