ಬಿಟ್ ಕಾಯಿನ್ ಪ್ರಕರಣ: ಪೊಲೀಸರಿಂದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕೃಷ್ಣ ವಿಚಾರಣೆ

Update: 2021-11-07 12:17 GMT

ಬೆಂಗಳೂರು, ನ.7:ರಾಜ್ಯ ರಾಜಕಾರಣದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಬಿಟ್ ಕಾಯಿನ್ ಹಗರಣದ ಪ್ರಮುಖ ರೂವಾರಿ ಎನ್ನಲಾದ ಹ್ಯಾಕರ್ ಶ್ರೀಕಿ ಯಾನೆ ಶ್ರೀಕೃಷ್ಣನ ವಿಚಾರಣೆಯನ್ನು ನಗರ ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ನಿನ್ನೆ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದು, ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳ ಪಡಿಸಿದ್ದು, ಹಲವು ಮಹತ್ವದ ವಿಷಯಗಳು ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಈಗಾಗಲೇ ಆರೋಪಿ ಶ್ರೀಕಿ, ಡ್ರಗ್ಸ್ ಜಾಲ, ಸರಕಾರಿ ವೆಬ್‍ಸೈಟ್ ಹ್ಯಾಕಿಂಗ್ ಅಕ್ರಮಗಳಲ್ಲಿ ಭಾಗಿಯಾಗಿರುವ ಕಾರಣದಿಂದಾಗಿ ಈತನ ವಿಚಾರಣೆ ಮುಂದುವರೆದಿದೆ.

ಶ್ರೀಕಿ ಬಂಧನದ ನಂತರ ಬಿಟ್ ಕಾಯಿನ್ ಹಗರಣಕ್ಕೆ ಮತ್ತಷ್ಟು ಜೀವ ಬಂದಂತಾಗಿದೆ. ಹಲ್ಲೆ ಆರೋಪದ ಮೇಲೆಯೇ ಆರೋಪಿಗಳನ್ನು ಬಂಧಿಸಲಾಗಿದ್ದರೂ, ಬಿಟ್ ಕಾಯಿನ್ ಕುರಿತು ಹೆಚ್ಚು ಮಾಹಿತಿ ಕಲೆಹಾಕಲಾಗುತ್ತಿದೆ ಎನ್ನಲಾಗಿದೆ.

ಮತ್ತೊಂದೆಡೆ ಸೈಬರ್ ಅಪರಾಧಗಳ ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯ ಪರಿಣಿತರು ಕೂಡ ಶ್ರೀಕಿಯನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News