×
Ad

ಬೆಂಗಳೂರು: ಗ್ಯಾಸ್ ಮೇಲಿನ ತೆರಿಗೆ ತಗ್ಗಿಸಲು ಆಗ್ರಹ

Update: 2021-11-09 23:21 IST

ಬೆಂಗಳೂರು, ನ.9: ಆಟೊ ರಿಕ್ಷಾಗಳ ಗ್ಯಾಸ್ ಮೇಲಿನ ತೆರಿಗೆಯನ್ನು ಕೇಂದ್ರ ಸರಕಾರ ತಗ್ಗಿಸಬೇಕು ಎಂದು ಒತ್ತಾಯಿಸಿ ಆಟೊರಿಕ್ಷಾ ಡ್ರೈವರ್ಸ್ ಯೂನಿಯನ್(ಸಿಐಟಿಯು) ಸದಸ್ಯರು ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಕೆಜಿ ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಯೂನಿಯನ್ ಸದಸ್ಯರು, ಕೇಂದ್ರ ಸರಕಾರವು ಆಟೊರಿಕ್ಷಾ ಗ್ಯಾಸ್ ಮೇಲಿನ ತೆರಿಗೆ ಕಡಿತಗೊಳಿಸಬೇಕು. ಅದೇ ರೀತಿ, ಮೀಟರ್‌ದರ ಕಿಲೋಮೀಟರ್‌ಗೆ 16 ರೂಪಾಯಿ ಹಾಗೂ ಕನಿಷ್ಠ ದರ 30 ರೂ.ಹೆಚ್ಚಳ ಮಾಡುವಂತೆ ಆಗ್ರಹಿಸಿದರು.

ಇತ್ತೀಚೆಗೆ ರಾಜ್ಯ ಸರಕಾರವು ಆಟೊ ಬಾಡಿಗೆದರ ಹೆಚ್ಚಳ ಮಾಡಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ, ಗ್ಯಾಸ್ ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಬೇಕು. ಆಗ ಮಾತ್ರ ಆಟೊಚಾಲಕರು ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಾರೆ ಎಂದು ಪ್ರತಿಭಟನಾಕಾರರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News