ಬೆಂಗಳೂರು; ಇನ್‍ಸ್ಪೆಕ್ಟರ್ ಮೇಲೆ ಹಲ್ಲೆ: ಆರೋಪ
Update: 2021-11-10 19:15 IST
ಬೆಂಗಳೂರು, ನ.10: ಹಣ ಪಾವತಿ ಮಾಡುವ ವಿಚಾರಕ್ಕೆ ತೆರಿಗೆ ಇಲಾಖೆಯ ಜಿಎಸ್ಟಿ ಇನ್‍ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಪಬ್ ಮಾಲಕ ಸೇರಿದಂತೆ ನಾಲ್ವರು ದುಷ್ಕರ್ಮಿಗಳು ಜಿಎಸ್ಟಿ ವಿಭಾಗದ ಇನ್‍ಸ್ಪೆಕ್ಟರ್ ವಿನಯ್ ಮಂಡಲ್‍ರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ನ.5ರ ರಾತ್ರಿ ಕೋರಮಂಗಲದಲ್ಲಿರುವ ಹ್ಯಾಪಿಟ್ರೋ ಪಬ್‍ಗೆ ಇನ್‍ಸ್ಪೆಕ್ಟರ್ ವಿನಯ್ ಮಂಡಲ್ ತೆರಳಿದ್ದು, ಹಣ ವಿಚಾರವಾಗಿ ಪಬ್ ಮಾಲಕ ರಾಕೇಶ್‍ಗೌಡನೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಕಲಿ ಇನ್‍ಸ್ಪೆಕ್ಟರ್ ಆಗಿರಬಹುದು ಎಂದು ಭಾವಿಸಿದ ಮಾಲಕ ರಾಕೇಶ್, ಹಲ್ಲೆ ನಡೆಸಿ, ಬಳಿಕ ಬಿಟ್ಟು ಕಳುಹಿಸಿದ್ದಾರೆ.
ಈ ಕುರಿತು ವಿನಯ್ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಮಾಲಕ ರಾಕೇಶ್‍ಗೌಡ ಹಾಗೂ ಬೌನ್ಸರ್‍ಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.