×
Ad

ಬೆಂಗಳೂರಿನಲ್ಲಿ ಮಳೆ ಜೊತೆ ಮೈ ಕೊರೆವ ಚಳಿ: ನಡುಗಿದ ನಗರ

Update: 2021-11-12 21:06 IST

ಬೆಂಗಳೂರು, ನ.12: ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಜತೆಗೆ ಮೈಕೊರೆವ ಚಳಿ ನಗರದ ಜನರನ್ನು ನಡುಗುವಂತೆ ಮಾಡಿದೆ. 

ಚಂಡಮಾರುತದ ಪರಿಣಾಮದಿಂದ ನಗರದಲ್ಲಿ ಕಳೆದ ಎರಡು ದಿನಗಳಿಂದ ಚಳಿ ವಾತಾವರಣವಿತ್ತು. ಶಾಲಾ ಮಕ್ಕಳು ಮಳೆಯಲ್ಲಿಯೇ ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು. ಸವಾರರು ನೆನೆದುಕೊಂಡೇ ವಾಹನ ಚಲಾಯಿಸಿದರು. ಹಲವರು ಅನಿವಾರ್ಯವಾಗಿ ಆಟೋಗಳನ್ನು ಅವಲಂಬಿಸಬೇಕಾಯಿತು.  

ಲಕ್ಕಸಂದ್ರ, ಕೆಂಗೇರಿ, ಗುಟ್ಟಹಳ್ಳಿ, ಆರ್.ಆರ್.ನಗರ, ಪುಲಿಕೇಶಿನಗರ, ಕೋರಮಂಗಲ, ಬಸವನಗುಡಿ, ತಾವರಕೆರೆ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಶಿವಾನಂದ ವೃತ್ತ, ಗಾಂಧಿನಗರ, ಜಯನಗರ, ಚಾಮರಾಜಪೇಟೆ, ಯಶವಂತಪುರ, ಜೆಪಿ ನಗರ ಸೇರಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ.

ಮೈ ಕೊರೆವ ಚಳಿ ಹಿನ್ನೆಲೆಯಲ್ಲಿ ಜನರು ಸ್ವೆಟರ್, ಜಾಕೆಟ್ ಸೇರಿ ಬೆಚ್ಚಗಿನ ಉಡುಪುಗಳ ಮೊರೆ ಹೋಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶದಲ್ಲಿ ಸರಾಸರಿ 3-4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. 

ಯೆಲ್ಲೋ ಅಲರ್ಟ್: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ನ.15ರವರೆಗೆ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News