×
Ad

ಬೆಂಗಳೂರು: ಮಳೆ ನಡುವೆಯೂ ಕೃಷಿಮೇಳದಲ್ಲಿ ಭಾಗವಹಿಸಿದ ಜನ

Update: 2021-11-12 22:09 IST

ಬೆಂಗಳೂರು, ನ.12: ಕೃಷಿ ಮೇಳದ ಎರಡನೆಯ ದಿನವಾದ ಶುಕ್ರವಾರದಂದು ಮಳೆ ನಡುವೆಯೂಒಂದು ಲಕ್ಷಜನರು ಕೃಷಿಮೇಳದಲ್ಲಿ ಭಾಗವಹಿಸಿದ್ದರು. 5ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್ ಮತ್ತುಫೇಸ್‌ಬುಕ್ ಮೂಲಕ ಕೃಷಿ ಮೇಳವನ್ನು ವಿಕ್ಷೀಸಿದ್ದಾರೆ ಎಂದು ಪ್ರಕಟಣೆಯಲ್ಲಿ ಬೆಂಗಳೂರು ಕೃಷಿ ವಿವಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನುಎರಡು ದಿನಗಳು ನಗರದಜಿಕೆವಿಕೆಆವರಣದಲ್ಲಿ ಕೃಷಿಮೇಳವು ನಡೆಯಲಿದ್ದು, ರೈತರಿಗೆಉಪಯೋಗವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹಾಗೆಯೇ ಮೇಳದಲ್ಲಿ ಕೃಷಿಯ ಹೊಸ ತಂತ್ರಜ್ಞಾನ ಮತ್ತು ಹೊಸ ತಳಿಗಳನ್ನು ರೈತರಿಗೆ ಪರಿಚಯಿಸಲಾಗುವುದುಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News