×
Ad

ಬೆಂಗಳೂರು; ಕ್ರಿಕೆಟ್ ಬೆಟ್ಟಿಂಗ್ ನಿರತ ಆರೋಪಿಯ ಸೆರೆ, 3 ಲಕ್ಷ ರೂ. ವಶ

Update: 2021-11-13 12:23 IST
ಸಾಂದರ್ಭಿಕ ಚಿತ್ರ (source: PTI)

ಬೆಂಗಳೂರು, ನ.13: ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ನಿರತನಾಗಿದ್ದ ಆರೋಪದಲ್ಲಿ ಹನುಮಂತರ ನಗರದಲ್ಲಿ ಓರ್ವನನ್ನು ಶುಕ್ರವಾರ ಬಂಧಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು ಆತನಿಂದ 3 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಲಲಿತ್ ಕುಮಾರ್ ಧಾರಿವಾಲ್ ಬಂಧಿತ ಆರೋಪಿ. ಈತನಿಂದ ಬೆಟ್ಟಿಂಗ್ ಗೆ ಸಂಬಂಧಿಸಿದ 3 ಲಕ್ಷ ರೂ. ನಗದು ಹಾಗೂ ಒಂದು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಲಲಿತ್ ಕುಮಾರ್ ಟ್ವಿಂಟಿ-20 ವಿಶ್ವಕಪ್ ಟೂರ್ನಿಯ ನ.11ರಂದು ನಡೆದ ಆಸ್ಟ್ರೇಲಿಯಾ - ಪಾಕಿಸ್ತಾನ ಪಂದ್ಯಾಟಕ್ಕೆ ಸಂಬಂಧಿಸಿ ಬೆಟ್ಟಿಂಗ್ ನಡೆಸಿದ್ದ ಹಾಗೂ 14ರಂದು ನಡೆಯುವ ಫೈನಲ್ ಪಂದ್ಯಕ್ಕೆ ಸಂಬಂಧಿಸಿ ಬೆಟ್ಟಿಂಗ್ ಗೆ ಸಿದ್ಧತೆಯಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News