ರಸ್ತೆಗುಂಡಿ ಮುಚ್ಚಲು ಪ್ರತಿ ವಾರ್ಡ್‍ಗೆ 60 ಲಕ್ಷ ರೂ.ಅನುದಾನ: ಬಿಬಿಎಂಪಿ

Update: 2021-11-14 15:21 GMT

ಬೆಂಗಳೂರು, ನ. 14: `ಬಿಬಿಎಂಪಿ ಪ್ರತಿ ವಾರ್ಡ್‍ಗೂ 60 ಲಕ್ಷ ರೂ.ಅನುದಾನವನ್ನು ಬಿಡುಗಡೆ ಮಾಡಿದೆ. ರಸ್ತೆಗುಂಡಿ ಮುಚ್ಚಲು, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಮತ್ತು ಕೊಳವೆ ಬಾವಿ ನಿರ್ಮಾಣಕ್ಕಾಗಿ ಆ ಅನುದಾನವನ್ನು ವಿನಿಯೋಗಿಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಹಣಕಾಸು ಆಯುಕ್ತೆ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ರವಿವಾರ ಏರ್ಪಡಿಸಿದ್ದ ಕಾರ್ಯಗಾರವೊಂದರಲ್ಲಿ ಮಾತನಾಡಿದ ಅವರು, ಹಾಗೆಯೇ ಬಿಬಿಎಂಪಿಯ 8 ವಲಯಗಳ ಎಲ್ಲ ವಾರ್ಡ್‍ಗಳಲ್ಲಿ 4,219 ಸಮಿತಿ ಸಭೆಗಳು ಒಂದು ವರ್ಷದಿಂದ ನಡೆದಿದೆ. ಪ್ರತಿ ತಿಂಗಳಲ್ಲಿ ಸರಾಸರಿ 181 ಸಭೆಗಳು ನಡೆದಿದ್ದು, 33 ವಾರ್ಡ್‍ಗಳಲ್ಲಿ ತಿಂಗಳಿಗೆ ಎರಡು ಸಮಿತಿ ಸಭೆಗಳು ಮತ್ತು 72 ವಾರ್ಡ್‍ಗಳಲ್ಲಿ ತಿಂಗಳಿಗೆ ಒಂದು ಸಮಿತಿ ಸಭೆ ನಡೆದಿದೆ. ಸಭೆಗಳಲ್ಲಿ ಸಾರ್ವಜನಿಕರ ಕುಂದು-ಕೊರತೆಗಳ ಕುರಿತು ವಾರ್ಡ್‍ನ ನೋಡಲ್ ಅಧಿಕಾರಿಗಳು ಉತ್ತರಿಸಿದ್ದಾರೆ ಎಂದು ಜನಾಗ್ರಹ ಸಂಸ್ಥೆ ವರದಿ ನೀಡಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News