ಬೆಂಗಳೂರು; ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ವಂಚನೆ: 2 ಪ್ರಕರಣ ದಾಖಲು

Update: 2021-11-15 13:09 GMT

ಬೆಂಗಳೂರು, ನ.15: ಉದ್ಯೋಗ ಹುಡುಕುತ್ತಿರುವ ಯುವಕರನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳು ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ವಂಚನೆ ಸಂಬಂಧಿಸಿದಂತೆ ಆಗ್ನೇಯ ಹಾಗೂ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ 2 ಪ್ರಕರಣಗಳು ದಾಖಲಾಗಿವೆ. ಪುನೀತ್ ಪೊನ್ನಪ್ಪ ಹಾಗೂ ಹರ್ಷವರ್ಧನ್ ಎಂಬುವರು ಈ ಜಾಲದಿಂದ ಮೋಸ ಹೋದ ಬಗ್ಗೆ ದೂರು ನೀಡಿದ್ದಾರೆ.

ಇತ್ತೀಚಿಗೆ ಪುನೀತ್ ಪೊನ್ನಪ್ಪ ಎಂಬುವರಿಗೆ ಕರೆ ಮಾಡಿದ್ದ ವಂಚಕನೊಬ್ಬ ವರ್ಕ್ ಫ್ರಂ ಹೋಮ್ ಆಧಾರದ ಮೇಲೆ ಇ-ಕಾಮರ್ಸ್ ಕಂಪೆನಿಯಿಂದ ರಿಚಾರ್ಜ್ ಕೆಲಸ ನೀಡುವುದಾಗಿ 5.54 ಲಕ್ಷರೂ. ವಂಚನೆ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಹರ್ಷವರ್ಧನ್‍ಗೆ ಅಮೇಜಾನ್‍ನಿಂದ ಅರೆಕಾಲಿಕ ಉದ್ಯೋಗ ನೀಡುವುದಾಗಿ ವಂಚಿಸಿದ್ದಾನೆ. ಈ ಪ್ರಕರಣಗಳ ಸಂಬಂಧ ಪೊಲೀಸರು ವಂಚಕರ ಬೆನ್ನಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News