×
Ad

ಬೆಂಗಳೂರಿನಲ್ಲಿ ಹಲವೆಡೆ ಧಾರಾಕಾರ ಮಳೆ: ಮನೆಗೆ ನುಗ್ಗಿದ ನೀರು, ವಾಹನ ಸವಾರರ ಪರದಾಟ

Update: 2021-11-15 23:16 IST

ಬೆಂಗಳೂರು: ನಗರದ ಹಲವೆಡೆ ಸುರಿದ ಭಾರೀ ಮಳೆಯಿಂದಾಗಿ 10 ಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ 

ಇಲ್ಲಿನ ಕೋರಮಂಗಲ, ಕಾವಲ್‌ಭೈರಸಂದ್ರ, ಜೆ.ಪಿ.ನಗರ, ಶಾಂತಿನಗರ, ಮೆಜೆಸ್ಟಿಕ್, ಲಾಲ್​ಬಾಗ್, ಕೆ.ಆರ್.ಸರ್ಕಲ್​, ರಿಚ್ಮಂಡ್​ ಸರ್ಕಲ್​, ವಿಲ್ಸನ್​ ಗಾರ್ಡನ್​, ಜಯನಗರ ಸೇರಿ ನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದ ಟ್ರಾಫಿಕ್‌ ಜಾಮ್‌ ಆಗಿ ಸವಾರರು ಪರದಾಡುವಂತಾಗಿದೆ.

ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ವಸ್ತುಗಳು ಮಳೆನೀರಿನಿಂದ ಆವೃತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News