ಬೆಂಗಳೂರಿನಲ್ಲಿ 2 ಬ್ಯಾಗ್‍ಗಳಲ್ಲಿದ್ದ 401 ನಕ್ಷತ್ರ ಆಮೆ ವಶಕ್ಕೆ

Update: 2021-11-16 13:59 GMT
ಫೈಲ್ ಚಿತ್ರ

ಬೆಂಗಳೂರು, ನ.16: ಅಪರೂಪದ ನಕ್ಷತ್ರ ಆಮೆ ಸಾಗಾಣೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಕಲಾಸಿಪಾಳ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಮುತ್ತು ಅಹ್ಮದ್ ಮೀರಾ(51) ಬಂಧಿತ ಆರೋಪಿಯಾಗಿದ್ದಾನೆ.

ಕಲಾಸಿಪಾಳ್ಯದ ಎವಿ ರಸ್ತೆಯ ನ್ಯಾಷನಲ್ ಟ್ರಾವೆಲ್ಸ್ ಬಳಿ ಎರಡು ಬ್ಯಾಗ್‍ಗಳಲ್ಲಿ ಆರೋಪಿಯು ನಕ್ಷತ್ರ ಆಮೆಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡಾಗ ಸಿಕ್ಕಿ ಬಿದ್ದಿದ್ದಾನೆ. 

ಬಂಧಿತನಿಂದ 2 ಬ್ಯಾಗ್‍ಗಳಲ್ಲಿದ್ದ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ 21 ಆಮೆಗಳು ಮೃತಪಟ್ಟಿದ್ದರೆ, 20 ಅಸ್ವಸ್ಥ ಸ್ಥಿತಿಯಲ್ಲಿವೆ. ಉಳಿದ ಆಮೆಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News