×
Ad

ಮಹಾರಾಷ್ಟ್ರ: ಅಂಗಡಿಗೆ ನುಗ್ಗಿ ಮಾಲಿಕನನ್ನು ಹತ್ಯೆಗೈದು ದರೋಡೆಗೈದ ದುಷ್ಕರ್ಮಿಗಳು

Update: 2021-11-17 15:02 IST

ಮುಂಬೈ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ದರೋಡೆ ಕೋರರು ಅಂಗಡಿಯವನೊಬ್ಬನನ್ನು ಕತ್ತಿಯಿಂದ ಕಡಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಲ್ಧಾನಾದ ಚಿಖ್ಲಿ ನಗರದ ಎಲೆಕ್ಟ್ರಾನಿಕ್ಸ್ ಅಂಗಡಿಯ ಒಳಗೆ ಹಾಗೂ  ಹೊರಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಭೀಕರ  ಘಟನೆ ಸೆರೆಯಾಗಿದೆ.

ಅಂಗಡಿಯ ಮಾಲಿಕನನ್ನು ಕಮಲೀಶ್ ಪೋಪಟ್ ಎಂದು ಗುರುತಿಸಲಾಗಿದ್ದು, ಅವರು ಅಂಗಡಿಯನ್ನು  ಮುಚ್ಚಿ ಮನೆಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಅಂಗಡಿಯೊಳಗೆ ಪ್ರವೇಶಿಸಿದ್ದಾರೆ.

ಅಂಗಡಿಯಾತ ದಾಳಿಕೋರರ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಅಂಗಡಿಯಾತನ  ಮೇಲೆ ಕತ್ತಿಯಿಂದ ತೀವ್ರವಾಗಿ ಹಲ್ಲೆ ನಡೆಸಲಾಯಿತು.

ದರೋಡೆಕೋರರು ಶೀಘ್ರದಲ್ಲೇ ಆನಂದ್ ಎಲೆಕ್ಟ್ರಾನಿಕ್ಸ್ ಎಂಬ ಅಂಗಡಿಯಿಂದ ಕದ್ದ ಹಣ ಹಾಗೂ  ಇತರ ಬೆಲೆಬಾಳುವ ವಸ್ತುಗಳನ್ನು ತಮ್ಮ ಮೋಟಾರು ಬೈಕಿನಲ್ಲಿಟ್ಟು ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News