ಜಮ್ಮು ಕಾಶ್ಮೀರ: ನಾಗರಿಕರ ಹತ್ಯೆ ಪ್ರಕರಣ ನ್ಯಾಯಾಂಗ ತನಿಖೆಗೆ ಸಿಸಿಜಿ ಆಗ್ರಹ

Update: 2021-11-19 18:29 GMT

ಶ್ರೀನಗರ, ನ. 19: ಜಮ್ಮು ಹಾಗೂ ಕಾಶ್ಮೀರದ ಹೈದರ್‌ಪೋರಾ ಎನ್ ಕೌಂಟರ್ ನಲ್ಲಿ ಇಬ್ಬರು ನಾಗರಿಕರ ಹತ್ಯೆಯ ಬಗ್ಗೆ ಕೇಂದ್ರದ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ನೇತೃತ್ವದ ‘ದಿ ಕನ್ಸರ್ನಡ್ ಸಿಟಿಜನ್ ಗ್ರೂಪ್’ (ಸಿಸಿಜಿ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಸತ್ಯ ಬಹಿರಂಗಪಡಿಸಲು ಹಾಗೂ ಕಾನೂನಿನ ಬಗ್ಗೆ ಜನರಲ್ಲಿ ನಂಬಿಕೆ ಮರು ಸ್ಥಾಪಿಸಲು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದೆ. ಹೈದರ್‌ಪೋರಾ ಘಟನೆ ಕುರಿತು ಸರಕಾರ ನೀಡುವ ವಿವರಣೆ ಕೆಸರು ನೀರಿನಂತಿದೆ ಹಾಗೂ ಘಟನೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ರಾಜ್ಯಪಾಲರು ದಂಡಾಧಿಕಾರಿ ತನಿಖೆಗೆ ಆದೇಶ ನೀಡಿರುವುದು ಕಣ್ಣೊರೆಸುವ ತಂತ್ರ ಹೊರತು ಬೇರೇನೂ ಅಲ್ಲ ಎಂದು ಸಿಸಿಜಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News