ಬೆಂಗಳೂರು: ವಿದ್ಯುತ್ ತಿದ್ದುಪಡಿ ಕಾಯ್ದೆ ವಿರುದ್ದ ಎಸ್‍ಯುಸಿಐ ಪ್ರತಿಭಟನೆ

Update: 2021-11-24 16:43 GMT

ಬೆಂಗಳೂರು, ನ. 24: ಸಾರ್ವಜನಿಕ ವಲಯದಲ್ಲಿನ ವಿದ್ಯುತ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ಅದನ್ನು ಕಾರ್ಪೋರೇಟ್ ವ್ಯವಹಾರಗಳಡಿಗೆ ತರಲು ಹುನ್ನಾರ ನಡೆಸಿರುವ ಕೇಂದ್ರದ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎಸ್‍ಯುಸಿಐ ಕಾರ್ಯಕರ್ತರಯ ಇಂದಿಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೇಂದ್ರ ಸರಕಾರದ ವಿರುದ್ಧದ ಧಿಕ್ಕಾರದ ಘೋಷಣೆ ಕೂಗಿದ ಕಾರ್ಯಕರ್ತರು, ಕರಾಳ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಒತ್ತಾಯಿಸಿ ಬಲಿಷ್ಠ ಹೋರಾಟವನ್ನು ಕಟ್ಟಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. 

ಈ ವೇಳೆ ಮಾತನಾಡಿದ ಎಸ್‍ಯುಸಿಐ ರಾಜ್ಯ ಸಮಿತಿ ಸದಸ್ಯ ವಿ.ಜ್ಞಾನಮೂರ್ತಿ, ‘ದೇಶದಲ್ಲಿ ಬಿಜೆಪಿಯು ಸಾರ್ವಜನಿಕ ವಲಯ ಮತ್ತು ರಾಜ್ಯ ಚಾಲನೆಯಲ್ಲಿ ಬರುವ ವಿದ್ಯುತ್ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ, ಅದನ್ನು ಕಾಪೆರ್Çೀರೇಟ್ ವ್ಯವಹಾರಗಳ ಅಡಿಯಲ್ಲಿ ತರಲು ಸಜ್ಜಾಗುತ್ತಿದೆ. ವಿದ್ಯುತ್ ಒಳಗೊಂಡಂತೆ ಇನ್ನಿತರ ಸಾರ್ವಜನಿಕ ವಲಯಗಳನ್ನು ಖಾಸಗಿಕರಣಗೊಳಿಸುವ ಕುತಂತ್ರಕ್ಕೆ ಕೈ ಹಾಕುತ್ತಿದೆ' ಎಂದು ದೂರಿದರು.

‘ಯಾವ ವಲಯಗಳು ಜನಸಾಮಾನ್ಯರ ಬೆವರು ಮತ್ತು ರಕ್ತದಿಂದ ಅಭಿವೃದ್ದಿ ಆಗಿತ್ತೋ, ಈಗ ಅವನ್ನು ಶ್ರೀಮಂತ ಕಾಪೆರ್Çರೇಟ್‍ಗಳ ಬಾಯಿಗೆ ಹಾಕಲಾಗುತ್ತಿದೆ. ಯಾವ ರೀತಿ ದೇಶದ ರೈತರು ತಮ್ಮ ಅವಿಶ್ರಾಂತ ಹೋರಾಟದಿಂದ, ನೂರಾರು ರೈತರ ಬಲಿದಾನದಿಂದ ಮೂರು ಕೃಷಿ ಕಾಯ್ದೆಗಳು ಹಿಂಪಡೆಯುವಂತೆ ಮಾಡಿದರೋ, ಆ ಹೋರಾಟದಿಂದ ನಾವು ಸ್ಫೂರ್ತಿ ಪಡೆದು ಈಗ ತಂದಿರುವ ವಿದ್ಯುತ್ ತಿದ್ದುಪಡಿ ಮಸೂದೆ-2021 ಅನ್ನು ವಿರೋಧಿಸಬೇಕು' ಎಂದು ಅವರು ಕರೆ ನೀಡಿದರು. 

ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್, ಈ ಹಿಂದೆ ಇದ್ದಂತಹ ಸಬ್ಸಿಡಿ ವ್ಯವಸ್ಥೆಯನ್ನು ಈಗಿನ ಕೇಂದ್ರ ಬಿಜೆಪಿ ಸರಕಾರ ಸಂಪೂರ್ಣ ಹಿಂಪಡೆದಿದೆ. ಬಡತನದ ರೇಖೆಗಿಂತ ಕೆಳಗಿರುವ ಗ್ರಾಹಕರು, ಕೃಷಿಕರು ಅಥವಾ ಹಣ ಪಾವತಿಸಲು ಸಾಮಥ್ರ್ಯವಿಲ್ಲದ ಜನರ ಅನುಕೂಲಕ್ಕಾಗಿ ಮಾಡಲಾಗಿತ್ತು. ಇದೀಗ ಆ ಸಬ್ಸಿಡಿಯನ್ನು ವಾಪಸ್ ಪಡೆದಿದ್ದಾರೆ. ಇದರಿಂದಾಗಿ, ದೇಶದ ದೊಡ್ಡ ಸಂಖ್ಯೆಯ ಬಡಜನರಿಗೆ ವಿದ್ಯುತ್ ಸುಂಕವು ಗಗನಕ್ಕೇರುತ್ತದೆ. ಜನಸಾಮಾನ್ಯರ ದೈನಂದಿನ ಬದುಕಿಗೆ ಸಹಕಾರಿ ಆಗಬೇಕಿರುವ ವಿದ್ಯುತ್ ವಲಯವು, ಈ ಮಸೂದೆಯ ಮೂಲಕ ದೊಡ್ಡ ಲಾಭಕೋರ ಕಾರ್ಪೊರೇಟ್ ಸಂಸ್ಥೆಗಳ ಹಿಡಿತಕ್ಕೆ ಬಂದರೆ, ಸಾರ್ವಜನಿಕ ವಲಯವಾಗಿರುವ ವಿದ್ಯುತ್ ಸಂಪೂರ್ಣ ಕಾರ್ಪೊರೇಟೀಕರಣವಾಗುತ್ತದೆ ಎಂದು ದೂರಿದರು.

ಲಕ್ಷಾಂತರ ಮಂದಿ ರೈತರು, ಕಾರ್ಮಿಕರು, ಜನಸಾಮಾನ್ಯರು ವಿದ್ಯುತ್ ಬಳಕೆಯಿಂದ ಸಂಪೂರ್ಣ ಹೊರಗುಳಿಯುವಂತಾಗುತ್ತದೆ. ಬಿಜೆಪಿ ಸರಕಾರದ ಈ ನಿರ್ಧಾರವು ಮತ್ತೊಮ್ಮೆ ತಾವು ಕೇವಲ ಜನವಿರೋಧಿ ಮಾತ್ರವಲ್ಲ, ಕಾಪೆರ್Çರೇಟ್ ಪರ ಎಂಬುದನ್ನು ಸಾಬೀತು ಮಾಡಿದೆ. ಇವರಿಗೆ ಜನರ ಬಗ್ಗೆ ಕನಿಷ್ಠ ಬದ್ಧತೆ ಇದ್ದರೆ ಕೂಡಲೇ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News