ಬೆಂಗಳೂರಿನ ಖಾಸಗಿ ಶಾಲೆ, ಕಾಲೇಜಿನಲ್ಲಿ ಕೊರೋನ ಸ್ಫೋಟ: 47 ವಿದ್ಯಾರ್ಥಿಗಳಲ್ಲಿ ಸೋಂಕು ದೃಢ

Update: 2021-11-26 18:00 GMT

ಬೆಂಗಳೂರು: ನ,26: ನಗರದ ದೊಮ್ಮಸಂದ್ರ  ಮುಖ್ಯರಸ್ತೆಯಲ್ಲಿನ ಖಾಸಗಿ ಶಾಲೆಯೊಂದರಲ್ಲಿ 34 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಆನೇಕಲ್ ತಾಲೂಕು ಆರೋಗ್ಯಾಧಿಕಾರಿ ವಿನಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಒಟ್ಟು 497 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಓರ್ವ ಶಾಲಾಡಳಿತ ಸಿಬ್ಬಂದಿ ಸೇರಿದಂತೆ 33 ಮಂದಿ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ ಎಂದುಆರೋಗ್ಯ ಪ್ರಕಟನೆಯಲ್ಲಿ ಟಿಹೆಚ್ಒ ಅಧಿಕಾರಿ ತಿಳಿಸಿದ್ದಾರೆ. 

ಒಬ್ಬ ವಿದ್ಯಾರ್ಥಿ  ಆಸ್ಪತ್ರೆಯಲ್ಲಿ ದಾಖಲಾದರೆ 4ಮಂದಿ ಬೆಂಗಳೂರಿನ ಮನೆಯಲ್ಲಿಯೇ ಐಸೋಲೇಷನ್ ನಲ್ಲಿದ್ದಾರೆ. 6 ಮಂದಿ ಹೊರ ರಾಜ್ಯದಲ್ಲಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಉಳಿದ 22 ಮಂದಿ ಶಾಲಾ ವೈಧ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 67 ಮಂದಿಯ ಸೋಂಕು ಮಾದರಿ ಪರೀಕ್ಷೆಯ ಫಲಿತಾಂಶ ಹೊರಬೀಳಬೇಕಿದೆ.  

ಹಾಗೆಯೇ ಅನೇಕಲ್- ಚಂದಾಪುರ ಮುಖ್ಯರಸ್ತೆಯ ಮರಸೂರು ಗೇಟ್ ಬಳಿಯ ಸ್ಪೂರ್ತಿ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ಲ್ಲಿ ಒಟ್ಟು 158 ವಿದ್ಯಾರ್ಥಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದು 12 ಮಂದಿಗೆ ಸೋಂಕು ದೃಢಪಟ್ಟಿದೆ.

9 ಮಂದಿ ವಿದ್ಯಾರ್ಥಿಗಳನ್ನು  ಜಿಗಣಿ ಕೊರೋನ ನಿಯಂತ್ರಣ ಕೇಂದ್ರದಲ್ಲಿ ದಾಖಲಿಸಿದ್ದು, 3 ಮಂದಿ ಇತರೆ ಹೊರ ರಾಜ್ಯಗಳ ಅವರವರ ಮನೆಗಳಲ್ಲಿ ಐಸೋಲೇಷನ್ ನಲ್ಲಿದ್ದಾರೆ. 

ಉಳಿದ 106 ಕೊರೋನ ಸೋಂಕಿನ ಪರೀಕ್ಷೆಯ ಫಲಿತಾಂಶ ಹೊರಬೀಳಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ವಿನಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News