ಹೊಸ ಪ್ರಬೇಧ 'ಓಮಿಕ್ರಾನ್' ಕಳವಳದ ನಡುವೆ ಕೋವಿಡ್ ಕುರಿತು ಇಂದು ಪ್ರಧಾನಿ ಮೋದಿ ಸಭೆ

Update: 2021-11-27 05:58 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ  ದೇಶದ ಕೋವಿಡ್ ಹಾಗೂ  ವ್ಯಾಕ್ಸಿನೇಷನ್ ಪರಿಸ್ಥಿತಿ ಕುರಿತು ಪ್ರಮುಖ ಸರಕಾರಿ ಅಧಿಕಾರಿಗಳು ಭಾಗವಹಿಸಿದ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.

ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಪ್ರಧಾನಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ  ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,318 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ಶುಕ್ರವಾರ ಬೆಳಗ್ಗೆ ದಾಖಲಾಗಿದ್ದಕ್ಕಿಂತ ಶೇ.21.1ರಷ್ಟು ಕಡಿಮೆಯಾಗಿದೆ.

ಕೊರೋನ ವೈರಸ್ ನ ಬಿ.1.1.529 ಪ್ರಬೇಧದ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಕಾಳಜಿಯ ನಡುವೆ ಈ ಸಭೆ ನಡೆಸಲಾಗುತ್ತಿದೆ,

ಬಿ.1.1.529 ಪ್ರಬೇಧ ವು ಈ ವಾರ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು ಮತ್ತು ಬೋಟ್ಸ್ವಾನಾ, ಹಾಂಕಾಂಗ್, ಇಸ್ರೇಲ್ ಹಾಗೂ  ಬೆಲ್ಜಿಯಂನಲ್ಲಿ  50 ರೂಪಾಂತರಗಳನ್ನು ಕಂಡುಬಂದಿದೆ ಎಂದು ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News