ಮೊದಲ ಟೆಸ್ಟ್: ಅಕ್ಷರ್ ಪಟೇಲ್ ಗೆ ಐದು ವಿಕೆಟ್, ಉತ್ತಮ ಆರಂಭದ ಬಳಿಕ ಕುಸಿತ ಕಂಡ ಕಿವೀಸ್

Update: 2021-11-27 09:54 GMT
Photo: BCCI

ಕಾನ್ಪುರ: ಟಾಮ್ ಲಥಾಮ್ (95)ಹಾಗೂ ವಿಲ್ ಯಂಗ್(89) ಮೊದಲ ವಿಕೆಟ್ ಗೆ 151 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದ ಹೊರತಾಗಿಯೂ ಅಕ್ಷರ್ ಪಟೇಲ್ ನೇತೃತ್ವದ  ಭಾರತದ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಕಿವೀಸ್ 129ನೇ ಓವರ್ ಅಂತ್ಯಕ್ಕೆ 270 ರನ್ ಗೆ 8 ವಿಕೆಟ್ ಗಳನ್ನು ಕಳೆದುಕೊಂಡಿದೆ.

ಮೂರನೇ ದಿನವಾದ ಶನಿವಾರ ಅಕ್ಷರ್ ಪಟೇಲ್(5-59)ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. 128ನೇ ಓವರ್ ನಲ್ಲಿ ಟಿಮ್ ಸೌಥಿ ವಿಕೆಟನ್ನು ಉರುಳಿಸಿದ ಗುಜರಾತ್ ಬೌಲರ್ ಪಟೇಲ್ ಐದನೇ ಬಾರಿ  5 ವಿಕೆಟ್ ಗೊಂಚಲು ಪಡೆದರು. ಆಫ್ ಸ್ಪಿನ್ನರ್  ಆರ್ ಅಶ್ವಿನ್(1-76), ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(1-56) ಹಾಗೂ ವೇಗದ ಬೌಲರ್ ಉಮೇಶ್ ಯಾದವ್(1-41)ತಲಾ ಒಂದು ವಿಕೆಟ್ ಗಳನ್ನು ಪಡೆದರು.

ನಾಯಕ ಕೇನ್ ವಿಲಿಯಮ್ಸನ್ 18 ಹಾಗೂ ಹಿರಿಯ ಬ್ಯಾಟರ್ ರಾಸ್ ಟೇಲರ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೌಲರ್ ಗಳಾದ ಕೈಲ್ ಜಮೀಸನ್(ಔಟಾಗದೆ17) ಹಾಗೂ ಸೋಮರ್ ವಿಲ್ಲೆ(1)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ 345 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News