ಮೊದಲ ಟೆಸ್ಟ್:ನ್ಯೂಝಿಲ್ಯಾಂಡ್ 296 ರನ್ ಗೆ ಆಲೌಟ್, ಭಾರತಕ್ಕೆ ಅಲ್ಪ ಮುನ್ನಡೆ

Update: 2021-11-27 10:52 GMT
Photo: BCCI

ಕಾನ್ಪುರ: ಟಾಮ್ ಲಥಾಮ್ (95)ಹಾಗೂ ವಿಲ್ ಯಂಗ್(89) ಮೊದಲ ವಿಕೆಟ್ ಗೆ 151 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದ ಹೊರತಾಗಿಯೂ ಅಕ್ಷರ್ ಪಟೇಲ್ ನೇತೃತ್ವದ  ಭಾರತದ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ ಕಿವೀಸ್ 142.3ನೇ ಓವರ್ ಗಳಲ್ಲಿ 296 ಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿದೆ. ಭಾರತವು ಮೊದಲ ಇನಿಂಗ್ಸ್ ನಲ್ಲಿ 49 ರನ್ ಅಲ್ಪ ಮುನ್ನಡೆ ಪಡೆದುಕೊಂಡಿದೆ.

ಮೂರನೇ ದಿನವಾದ ಶನಿವಾರ ಅಕ್ಷರ್ ಪಟೇಲ್(5-62)ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. 128ನೇ ಓವರ್ ನಲ್ಲಿ ಟಿಮ್ ಸೌಥಿ ವಿಕೆಟನ್ನು ಉರುಳಿಸಿದ ಗುಜರಾತ್ ಬೌಲರ್ ಪಟೇಲ್ ಐದನೇ ಬಾರಿ  5 ವಿಕೆಟ್ ಗೊಂಚಲು ಪಡೆದರು. ಆಫ್ ಸ್ಪಿನ್ನರ್  ಆರ್ ಅಶ್ವಿನ್(3-82), ಮೂರು ವಿಕೆಟ್ ಪಡೆದರೆ,  ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(1-57) ಹಾಗೂ ವೇಗದ ಬೌಲರ್ ಉಮೇಶ್ ಯಾದವ್(1-501)ತಲಾ ಒಂದು ವಿಕೆಟ್ ಗಳನ್ನು ಪಡೆದರು.

ನಾಯಕ ಕೇನ್ ವಿಲಿಯಮ್ಸನ್  18 ಹಾಗೂ ಹಿರಿಯ ಬ್ಯಾಟರ್ ರಾಸ್ ಟೇಲರ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೌಲರ್ ಕೈಲ್ ಜಮೀಸನ್(23) ಭಾರತಕ್ಕೆ ದೊಡ್ಡ ಮುನ್ನಡೆ ನಿರಾಕರಿಸಿದರು.

ಭಾರತ ಮೊದಲ ಇನಿಂಗ್ಸ್ ನಲ್ಲಿ 345 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News