ಮೀಟೂ ಪ್ರಕರಣ: ನಟಿ ಶೃತಿ ಹರಿಹರನ್‍ಗೆ ನೋಟಿಸ್

Update: 2021-11-28 11:08 GMT
ಫೈಲ್ ಚಿತ್ರ (ಶೃತಿ ಹರಿಹರನ್‍)

ಬೆಂಗಳೂರು, ನ. 28: ಚಿತ್ರನಟಿ ಶೃತಿ ಹರಿಹರನ್ ಅವರ `ಮೀಟೂ ಪ್ರಕರಣ'ಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ 2018ರಲ್ಲಿ ನಟಿ ಶೃತಿಹರಿಹರನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶೃತಿ ಹರಿಹರನ್ ದೂರಿನ್ವಯ ಅರ್ಜುನ್ ಸರ್ಜಾ ವಿರುದ್ಧ 354, 354, 354 ಮತ್ತು 506 ಐಪಿಸಿ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ಮೂರು ವರ್ಷಗಳ ಬಳಿಕ ಮತ್ತೆ ಮೀಟೂ ಪ್ರಕರಣ ಕುರಿತಂತೆ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಶೃತಿ ಹರಿಹರನ್‍ಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News