64ನೇ ಶೂಟಿಂಗ್ ನ್ಯಾಶನಲ್ಸ್ ಪಂದ್ಯಾವಳಿ: 25 ಮೀ. ರ್ಯಾಪಿಡ್ ಫಯರ್ ಪಿಸ್ತೂಲ್‌ನಲ್ಲಿ ಭವೇಶ್ ಶೆಖಾವತ್‌ಗೆ ಚಿನ್ನ

Update: 2021-11-28 18:39 GMT

ಹೊಸದಿಲ್ಲಿ, ನ. 28: ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 64ನೇ ಶೂಟಿಂಗ್ ನ್ಯಾಶನಲ್ಸ್ ಪಂದ್ಯಾವಳಿಯಲ್ಲಿ ರವಿವಾರ ರಾಜಸ್ಥಾನದ ಭವೇಶ್ ಶೆಖಾವತ್ ಪುರುಷರ 25 ಮೀಟರ್ ರ್ಯಾಪಿಡ್ ಫಯರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಸೇನೆಯ ಅನುಭವಿ ಶೂಟರ್ ಗುರ್‌ಪ್ರೀತ್ ಸಿಂಗ್ ಬೆಳ್ಳಿ ಗೆದ್ದರೆ, ಹರ್ಯಾಣದ ಅನೀಶ್ ಭನ್ವಾಲ ಕಂಚು ಪಡೆದರು.

ಈ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವಿಜಯ ಕುಮಾರ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗದಲ್ಲಿ ಕಂಚು ಗೆದ್ದಿರುವ ಅನೀಶ್ ಭನ್ವಾಲ, ಜೂನಿಯರ್ ರ್ಯಾಪಿಡ್ ಫಯರ್ ಸ್ಪರ್ಧೆಯಲ್ಲಿ ಚಿನ್ನ ಬಾಚಿದ್ದಾರೆ. ಪಂದ್ಯಾವಳಿಯ ಹತ್ತು ದಿನಗಳು ಈಗಾಗಲೇ ಕಳೆದಿದ್ದು ಪಿಸ್ತೂಲ್ ಸ್ಪರ್ಧೆಗಳಲ್ಲಿ 32 ಚಿನ್ನದ ಪದಕಗಳನ್ನು ವಿತರಿಸಲಾಗಿದೆ. ಈ ಪೈಕಿ ಹರ್ಯಾಣ 12 ಪದಕಗಳನ್ನು ಗೆದ್ದಿದ್ದು ಅಂಕಪಟ್ಟಿಯ ತುದಿಯಲ್ಲಿದೆ. ನಂತರದ ಸ್ಥಾನಗಳಲ್ಲಿ ದಿಲ್ಲಿ, ಪಂಜಾಬ್, ಉತ್ತರಪ್ರದೇಶ ಮತ್ತು ರಾಜಸ್ಥಾನಗಳಿವೆ. ಈ ರಾಜ್ಯಗಳು ತಲಾ ನಾಲ್ಕು ಚಿನ್ನದ ಪದಕಗಳನ್ನು ಪಡೆದಿವೆ. ಹರ್ಯಾಣವು ಅತಿ ಹೆಚ್ಚು 27 ಪದಕಗಳನ್ನು ಗೆದ್ದಿದೆ. ಡಿಸೆಂಬರ್ 6ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ 4,500ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News