ನಮ್ಮ ಮೆಟ್ರೋ ತಾಂತ್ರಿಕ ದೋಷ: 25 ನಿಮಿಷ ರೈಲಿನೊಳಗೇ ಇದ್ದ ಪ್ರಯಾಣಿಕರು

Update: 2021-11-29 17:34 GMT

ಬೆಂಗಳೂರು, ನ.29: ನಮ್ಮ ಮೆಟ್ರೋದಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷದ ಪರಿಣಾಮವಾಗಿ ಸೋಮವಾರದಂದು ಸುಮಾರು 25 ನಿಮಿಷ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ನಾಗಸಂದ್ರ, ರೇಷ್ಮೆ ಸಂಸ್ಥೆ ಮೆಟ್ರೋ ಸ್ಟೇಷನ್ ಬಳಿ ಮಧ್ಯಾಹ್ನ 1.10ಕ್ಕೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 

ಹೀಗಾಗಿ ಮೆಟ್ರೋ ರೈಲು ಓಡಾಟದಲ್ಲಿ ವ್ಯತ್ಯಯ ಉಂಟಾಗಿ ಮಧ್ಯಾಹ್ನ 1.35ಕ್ಕೆ ಮತ್ತೆ ಮೆಟ್ರೋ ಓಡಾಟ ಆರಂಭವಾಗಿದೆ. ಸುಮಾರು 25 ನಿಮಿಷ ಪ್ರಯಾಣಿಕರು ರೈಲಿನಲ್ಲೇ ಇದ್ದರು ಎಂದು ಬಿಎಂಆರ್‍ಸಿಎಲ್‍ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News