ಬೆಂಗಳೂರಿನಲ್ಲಿ ಡಿ.1ರಿಂದ ರಿಕ್ಷಾ ಪ್ರಯಾಣ ದರ ಏರಿಕೆ

Update: 2021-11-30 14:47 GMT

ಬೆಂಗಳೂರು, ನ. 30: ಪೆಟ್ರೋಲ್ ಹಾಗೂ ರಿಕ್ಷಾಗೆ ಬಳಕೆ ಮಾಡುವ ಅನಿಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನಾಳೆಯಿಂದ(ಡಿ.1) ರಾಜಧಾನಿ ಬೆಂಗಳೂರು ನಗರದಲ್ಲಿ ಆಟೋರಿಕ್ಷಾ ಪ್ರಯಾಣ ದರ ಕನಿಷ್ಠ 5 ರೂ.ಗಳಷ್ಟು ಹೆಚ್ಚಾಗಲಿದೆ.

ಆಟೋಮೀಟರ್ ದರ ಹೆಚ್ಚಳ ಆದೇಶ ಅಧಿಕೃತ ಜಾರಿಯಾಗಲಿದ್ದು, ಮೊದಲ 2 ಕಿಮೀಗೆ 30 ರೂ.ದರ ನಿಗದಿಪಡಿಸಲಾಗಿದೆ. ಆನಂತರದ ಪ್ರತಿ 1 ಕಿಮೀಗೆ 15 ರೂಪಾಯಿ, ಮೊದಲ ಐದು ನಿಮಿಷ ಕಾಯುವಿಕೆ ಉಚಿತ, ಆ ಬಳಿಕ ಪ್ರತಿ ನಿಮಿಷಕ್ಕೆ 5 ರೂ., 20 ಕೆಜಿ ವರೆಗೆ ಲಗೇಜ್(ಸರಕು) ಸಾಗಣೆ ಉಚಿತ. ಅದಕ್ಕೂ ಮೇಲ್ಪಟ್ಟಿದ್ದರೆ 5 ರೂ., ರಾತ್ರಿ 9ಗಂಟೆಯ ನಂತರ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು ದರ ನಿಗದಿಪಡಿಸಲಾಗಿದೆ.

ಸಹಕರಿಸಿ: ಕೋವಿಡ್ ಲಾಕ್‍ಡೌನ್,ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ನಾಳೆಯಿಂದ ಆಟೋರಿಕ್ಷಾ ಮೀಟರ್ ದರ ಏರಿಕೆಯಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಸಹಕರಿಸಬೇಕು. ನಗರದಲ್ಲಿ ಆಟೋರಿಕ್ಷಾ ಮಿನಿಮಮ್ ದರ 25 ರೂ.ನಿಂದ 30 ರೂ.ಗೆ ಏರಿಕೆಯಾಗಿದೆ. ಎಲ್ಲ ಅಗತ್ಯವಸ್ತುಗಳು, ಪೆಟ್ರೋಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಟೋ ದರವನ್ನು ಏರಿಕೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News