ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಭೇಟಿಯಾದ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷ ಶಾಫಿ ಸಅದಿ

Update: 2021-11-30 18:08 GMT

ಬೆಂಗಳೂರು, ನ.30: ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಅವರ  ನಿಯೋಗವು ಮಂಗಳವಾರ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಯಿತು.

ಸಿದ್ದರಾಮಯ್ಯ:  ಶಾಫಿ ಸಅದಿ ಅವರ ನಿಯೋಗವು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ವಕ್ಫ್ ಮಂಡಳಿಯು ಶಾಸನಬದ್ಧ ಮತ್ತು ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ಕೇವಲ ಮುಸ್ಲಿಂ ಸಮುದಾಯದ ಪವಿತ್ರವಾದ ಸ್ವತ್ತಾಗಿದೆ ಎಂದು ಹೇಳಿದರು. 

ಮಂಡಳಿಗೆ ರಾಜ್ಯ ಸರಕಾರದಿಂದ ಅವಶ್ಯವಿರುವ ಅಗತ್ಯ ಸಹಕಾರವನ್ನು ದೊರಕಿಸುವಲ್ಲಿ ಶ್ರಮಿಸುವುದಾಗಿ ಮತ್ತು ವಿರೋಧ ಪಕ್ಷದ ಪರವಾಗಿಯೂ ಅಗತ್ಯ ಸಹಕಾರ ಒದಗಿಸುವುದಾಗಿ ಆಶ್ವಾಸನೆ ನೀಡಿದರು.  

ಈ ಸಂದರ್ಭದಲ್ಲಿ ಶಾಸಕರಾದ ಝಮೀರ್ ಅಹ್ಮದ್ ಖಾನ್, ಬೈರತಿ ಸುರೇಶ್ ಉಪಸ್ಥಿತರಿದ್ದರು.
    
ಜಗದೀಶ್ ಶೆಟ್ಟರ್: ಶಾಫಿ ಸಅದಿ ಅವರ ನಿಯೋಗವು ಭೇಟಿಯಾದಾಗ ಮಾತನಾಡಿದ ಶೆಟ್ಟರ್ ಅವರು, ರಾಷ್ಟ್ರಮಟ್ಟದಲ್ಲಿ ವಕ್ಫ್ ಸಂಸ್ಥೆಗಳ ಆಡಳಿತ ನಿರ್ವಹಣೆ, ಸಂರಕ್ಷಣೆ ಮತ್ತು ಅಭಿವೃದ್ಧಿ ಪರ ಪ್ರಗತಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಹೆಸರು ಮುಂಚೂಣಿಯಲ್ಲಿದ್ದು, ಮಂಡಳಿಯ ವತಿಯಿಂದ ಕೈಗೊಳ್ಳಲಾಗುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು. ವಕ್ಫ್ ಆಸ್ತಿಗಳ ಸಂರಕ್ಷಣೆಗೆ ರಾಜ್ಯದಿಂದ ಎಲ್ಲ ರೀತಿಯ ಅಗತ್ಯ ಸಹಕಾರವನ್ನು ಪೂರೈಸುವಲ್ಲಿ ಸರಕಾರವು ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು. 

ಈ ಸಂದರ್ಭದಲ್ಲಿ ವಕ್ಫ್ ಮಂಡಳಿಯ ಅಧ್ಯಕ್ಷ ಶಾಫಿ ಸಅದಿ, ಸದಸ್ಯರಾದ ಅಬ್ದುಲ್ ರಿಯಾಜ್ ಖಾನ್, ಜಿ.ಯಾಕುಬ್ ಉಪಸ್ಥಿತರಿದ್ದರು. 
 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News