ಮಹಾರಾಷ್ಟ್ರ: 'ಅಪಾಯದಲ್ಲಿರುವ' ದೇಶಗಳಿಂದ ಆಗಮಿಸಿರುವ ಆರು ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್

Update: 2021-12-01 05:26 GMT

ಮುಂಬೈ:  'ಅಪಾಯದಲ್ಲಿರುವ' ದೇಶಗಳಿಂದ ಆಗಮಿಸಿರುವ ಆರು ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಬುಧವಾರ ಬೆಳಿಗ್ಗೆ ತಿಳಿಸಿದೆ.

ಎಲ್ಲಾ ಆರು ಪ್ರಯಾಣಿಕರಲ್ಲಿ ರೋಗಲಕ್ಷಣಗಳಿಲ್ಲದ ಅಥವಾ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರು ಹಾಗೂ ಅವರ ಮಾದರಿಗಳನ್ನು ಜಿನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಎಲ್ಲಾ ಆರು ಪ್ರಯಾಣಿಕರ ಸಂಪರ್ಕ ಪತ್ತೆ ಕಾರ್ಯ ನಡೆಯುತ್ತಿದೆ.

ಆರರಲ್ಲಿ ಮೂವರನ್ನು ಮುಂಬೈ, ಕಲ್ಯಾಣ್-ಡೊಂಬಿವಿಲಿ ಹಾಗೂ  ಮೀರಾ-ಭಾಯಂದರ್ ಪ್ರದೇಶಗಳಲ್ಲಿ ಪತ್ತೆ ಮಾಡಲಾಗಿದ್ದು, ನಾಲ್ಕನೆಯವರು ಪುಣೆಯಲ್ಲಿ ಪತ್ತೆಯಾಗಿದ್ದಾರೆ. ನೈಜೀರಿಯಾದಿಂದ ಆಗಮಿಸಿದ ಇನ್ನಿಬ್ಬರು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ  ಪತ್ತೆಯಾಗಿದ್ದಾರೆ.

ಓಮೈಕ್ರಾನ್ ಕೋವಿಡ್ ಸ್ಟ್ರೈನ್‌ನ ಪ್ರವೇಶ ಹಾಗೂ  ಹರಡುವಿಕೆಯ ಬಗ್ಗೆ ಹೆಚ್ಚುತ್ತಿರುವ ಕಳವಳದ ಮಧ್ಯೆ, ಭಾರತದ ವಿಮಾನ ನಿಲ್ದಾಣಗಳು 'ಅಪಾಯದಲ್ಲಿರುವ' ದೇಶಗಳ ಪ್ರಯಾಣಿಕರಿಗೆ ಇಂದಿನಿಂದ ಕಟ್ಟುನಿಟ್ಟಾದ ಸಂಪರ್ಕತಡೆಯನ್ನು ಹಾಗೂ  ಪರೀಕ್ಷಾ ನಿಯಮಗಳನ್ನು ಜಾರಿಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News