ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ಆರೋಪ: ಪ್ರಕರಣ ದಾಖಲು

Update: 2021-12-01 14:05 GMT

ಬೆಂಗಳೂರು, ಡಿ.1: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿರುವ ವಿಡಿಯೊವೊಂದು ಹೊರಬಂದಿದ್ದು, ಈ ಸಂಬಂಧ ಇಲ್ಲಿನ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕೊಲೆ ಬೆದರಿಕೆ ವಿಡಿಯೊ ಆಧಾರದ ಮೇಲೆ ಶಾಸಕ ಎಸ್.ಆರ್.ವಿಶ್ವನಾಥ್ ನೀಡಿದ ದೂರಿನನ್ವಯ ಮೊಕದ್ದಮೆ ದಾಖಲಾಗಿದ್ದು, ಪ್ರಮುಖ ಸಾಕ್ಷ್ಯವಾಗಿ ವಿಡಿಯೊ ಅನ್ನು ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ಹೂಡಲಾಗಿದೆ ಎನ್ನಲಾಗಿರುವ ವಿಡಿಯೊ ಬುಧವಾರ ಬಹಿರಂಗಗೊಂಡಿದೆ. ಇದರಲ್ಲಿ ದೇವರಾಜ್ ಯಾನೆ ಕುಳ್ಳ ದೇವರಾಜ್ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಭಾಷಣೆ ಇದ್ದು, ಹತ್ಯೆಗೆ ಸಂಚು ರೂಪಿಸುವ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಕಾಂಗೆಸ್ಸಿನ ಗೋಪಾಲಕೃಷ್ಣ ಅವರು ವಿಶ್ವನಾಥ್ ವಿರುದ್ಧವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಸೋತಿದ್ದರು. 

ದೂರಿನಲ್ಲಿ ಏನಿದೆ?: ಮತ್ತಗದಹಳ್ಳಿ ಗೋಪಾಲಕೃಷ್ಣ ಮತ್ತು ಇತರರು ನನ್ನ ವಿರುದ್ಧ ಕೊಲೆ ಸಂಚು, ಮಾನಹಾನಿ, ಅನಾವಶ್ಯಕ ವಿಷಯಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆದು ಜೀವ ಭಯ ಉಂಟು ಮಾಡಿದ್ದಾರೆ.

ಸಿಂಗನಾಯಕನ ಹಳ್ಳಿಯಲ್ಲಿ ವಾಸವಿರುವ ನನಗೆ ಮಂಗಳವಾರ ಬಂದ ಮಾಹಿತಿಯಂತೆ ಮುತ್ತಗದಹಳ್ಳಿ ಗೋಪಾಲಕೃಷ್ಣ ಇತರರು, ದೇವರಾಜ್ ಯಾನೆ ಕುಳ್ಳ ದೇವರಾಜ್ ಈತನ ಕಡೆಯಿಂದ ನಾನು ಸತತವಾಗಿ ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡುತ್ತಿರುವುದನ್ನು ಸಹಿಸಲಾಗದೆ, ದ್ವೇಷ ಅಸೂಯೆಗಳಿಂದ ನನ್ನನ್ನು ಕುಳ್ಳ ದೇವರಾಜ್ ಎಂಬಾತನ ಕಡೆಯಿಂದ ಮತ್ತು ಆಂಧ್ರದ ತಂಡದಿಂದ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ವಹಿಸಲು ಕೋರುತ್ತೇನೆ ಎಂದು ದೂರಿನಲ್ಲಿ ವಿಶ್ವನಾಥ್ ಉಲ್ಲೇಖಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಒಟ್ಟು 31 ನಿಮಿಷ 44 ಸೆಂಕೆಂಡುಗಳ ಸಮಯದ ಈ ವಿಡಿಯೋದಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಪೆÇಲೀಸ್ ಅಧಿಕಾರಿಯೊಬ್ಬರ ಜೊತೆಗೂ ಮಾತುಕತೆ ನಡೆಸುವ ಸನ್ನಿವೇಶವೂ ಸೆರೆ ಆಗಿದೆ. 

ಓರ್ವ ವಶಕ್ಕೆ

ವಿಡಿಯೊ ವೈರಲ್ ಹಿನ್ನೆಲೆ ಸಿಸಿಬಿ ತನಿಖಾಧಿಕಾರಿಗಳ ತಂಡವೊಂದು ದೇವರಾಜ್ ಯಾನೆ ಕುಳ್ಳ ದೇವರಾಜ್ ಅನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News