ಕೋವಿಶೀಲ್ಡ್ ಎರಡನೇ ಡೋಸ್‌ನ್ನು 84 ದಿನಗಳ ಮೊದಲು ನೀಡುವಂತಿಲ್ಲ: ಕೇರಳ ಹೈಕೋರ್ಟ್

Update: 2021-12-03 16:11 GMT
 ಕೇರಳ ಹೈಕೋರ್ಟ್

ತಿರುವನಂತಪುರ,ಡಿ.3: ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ನ್ನು ಕೇಂದ್ರವು ನಿಗದಿಗೊಳಿಸಿರುವ 84 ದಿನಗಳ ಮಧ್ಯಂತರದ ಮೊದಲು ನೀಡುವಂತಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಶುಕ್ರವಾರ ಎತ್ತಿಹಿಡಿದಿದೆ.

ಎರಡು ಡೋಸ್‌ಗಳ ನಡುವೆ ನಾಲ್ಕು ವಾರಗಳ ಮಧ್ಯಂತರವನ್ನು ಆಯ್ದುಕೊಳ್ಳಲು ವ್ಯಕ್ತಿಯೋರ್ವನಿಗೆ ಅವಕಾಶ ಕಲ್ಪಿಸಿದ್ದ ಏಕ ನ್ಯಾಯಾಧೀಶ ಪೀಠದ ಆದೇಶವನ್ನು ಮುಖ್ಯ ನ್ಯಾಯಾಧೀಶ ಎಸ್.ಮಣಿಕುಮಾರ ಮತ್ತು ನ್ಯಾ.ಶಾಜಿ ಪಿ.ಚಾಲಿ ಅವರ ಪೀಠವು ತಳ್ಳಿಹಾಕಿತು.

ನ್ಯಾ.ಪಿ.ಬಿ.ಸುರೇಶ ಅವರ ಹಿಂದಿನ ತೀರ್ಪನ್ನು ಕೇಂದ್ರವು ಸೆಪ್ಟಂಬರ್‌ನಲ್ಲಿ ಪ್ರಶ್ನಿಸಿತ್ತು. ಲಸಿಕೆ ಪಡೆಯುವುದು ಸ್ವಯಂಪ್ರೇರಿತವಾಗಿದೆ,ಹೀಗಾಗಿ ಸರಕಾರವು ಉಲ್ಲೇಖಿಸಿರುವ ಮಧ್ಯಂತರ ಅವಧಿಯನ್ನು ಸಲಹೆಯನ್ನಾಗಿ ಮಾತ್ರ ಪರಿಗಣಿಸಬಹುದು ಎಂದು ನ್ಯಾ.ಪಿ.ಬಿ.ಸುರೇಶ ತನ್ನ ತೀರ್ಪಿನಲ್ಲಿ ಹೇಳಿದ್ದರು. ಏಕ ನ್ಯಾಯಾಧೀಶರ ನಿರ್ಧಾರವು ಸರಕಾರದ ನೀತಿ ನಿರ್ಧಾರಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಸಮನಾಗಿದೆ ಎಂದು ಕೇಂದ್ರವು ವಾದಿಸಿತ್ತು.

ಶುಕ್ರವಾರದ ವಿಚಾರಣೆ ಸಂದರ್ಭದಲ್ಲಿ ಪೀಠವು,ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಅಂತರದ ಬಗ್ಗೆ ಸರಕಾರದ ನಿರ್ಧಾರವು ತಜ್ಞರ ಅಭಿಪ್ರಾಯವನ್ನು ಆಧರಿಸಿದೆ ಎಂದು ಬೆಟ್ಟು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News