ಗುಪ್ತಚರ ಸಂಸ್ಥೆ ಕಾರ್ಯನಿರ್ವಹಣೆ ವಿಧಾನ ನಿಯಂತ್ರಿಸುವ ಮಸೂದೆ ಲೋಕಸಭೆಯಲ್ಲಿ ಮಂಡಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ

Update: 2021-12-04 06:50 GMT
ಮನೀಶ್ ತಿವಾರಿ (File Photo: PTI)

ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಶುಕ್ರವಾರ ಲೋಕಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಯೊಂದನ್ನು ಮಂಡಿಸಿದರು.  ಇದು ಗುಪ್ತಚರ ಸಂಸ್ಥೆಗಳು  ವಿಶೇಷವಾಗಿ ಕಣ್ಗಾವಲು ಕ್ರಮಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ವಿಧಾನವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ.

ಅಂತಹ ಏಜೆನ್ಸಿಗಳ ಉತ್ತಮ ನಿಯಂತ್ರಣ ಹಾಗೂ ಮೇಲ್ವಿಚಾರಣೆಗಾಗಿ ನ್ಯಾಯಮಂಡಳಿಗಳು ಮತ್ತು ಸಮಿತಿಗಳನ್ನು ಸ್ಥಾಪಿಸಲು ಹಾಗೂ  ವ್ಯಕ್ತಿಗಳಿಂದ ಕಣ್ಗಾವಲು ಸಂಬಂಧಿತ ದೂರುಗಳ ಪರಿಹಾರಕ್ಕಾಗಿ ಈ ಮಸೂದೆ ಒತ್ತಾಯಿಸುತ್ತದೆ.

ಈ ಮಸೂದೆಯು "ಭಾರತದ ಭೂಪ್ರದೇಶದ ಒಳಗೆ ಹಾಗೂ  ಅದರಾಚೆಗಿನ ಗುಪ್ತಚರ ಸಂಸ್ಥೆಗಳ ಕಾರ್ಯಚಟುವಟಿಕೆ ಮತ್ತು ಅಧಿಕಾರದ ವಿಧಾನವನ್ನು ನಿಯಂತ್ರಿಸುವುದು" ಎಂದು ಲೋಕಸಭೆಗೆ ತಿವಾರಿ ಹೇಳಿದರು.

"ಎನ್‌ಎಸ್‌ಒ ಗುಂಪನ್ನು ನಿಷೇಧಿಸುವ ಯಾವುದೇ ಪ್ರಸ್ತಾಪವಿಲ್ಲ. ಇಸ್ರೇಲಿ ಸಂಸ್ಥೆ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಸಂಸ್ಥೆಯನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಎಂದು ಸರಕಾರ ಸಂಸತ್ತಿಗೆ ತಿಳಿಸಿದ ದಿನದಂದೇ ಈ  ಮಸೂದೆಯನ್ನು ಕೆಳಮನೆಯಲ್ಲಿ ಪರಿಚಯಿಸಲಾಯಿತು

ಈ ವರ್ಷದ ಜುಲೈನಲ್ಲಿ ಪೆಗಾಸಸ್ ಸ್ಪೈವೇರ್ ವಿವಾದದ ಕೇಂದ್ರಬಿಂದುವಾಗಿತ್ತು, ಅಂತರ್ ರಾಷ್ಟ್ರೀಯ ಮಾಧ್ಯಮ ಒಕ್ಕೂಟವು ವರದಿಗಳನ್ನು ಪ್ರಕಟಿಸಿದ ನಂತರ  ಭಾರತದಲ್ಲಿ ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರು ಸೇರಿದಂತೆ ಹಲವಾರು ಜನರ ಫೋನ್ ಸಂಖ್ಯೆಗಳನ್ನು ಸ್ನೂಪಿಂಗ್ ಪ್ರಯತ್ನದಲ್ಲಿ ಗುರಿಯಾಗಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News