ಬೆಂಗಳೂರು: ಪಾನ್‍ಕಾರ್ಡ್ ಪಡೆದು ವಂಚನೆ ಆರೋಪ; ದೂರು

Update: 2021-12-06 16:59 GMT

ಬೆಂಗಳೂರು, ಡಿ.6: ಪಾನ್‍ಕಾರ್ಡ್ ಮತ್ತು ಆಧಾರ್‍ಕಾರ್ಡ್ ಪಡೆದು ವಂಚಿಸುತ್ತಿರುವ ಕುರಿತು ಮಹಿಳೆಯೊಬ್ಬರು ಇಲ್ಲಿನ ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿವಿಧ ಯೋಜನೆಗಳನ್ನು ಹೆಸರಿಸಿ ದುಷ್ಕರ್ಮಿಗಳು ಇಲ್ಲಿನ ಪುಲಕೇಶಿನಗರದ ಸಂಗೀತಾ ಮಳಿಗೆಯಲ್ಲಿ ದಾಖಲೆ ಪಡೆದಿದ್ದರು. ನಂತರ ಮಹಿಳೆಗೆ 1,000 ರೂ. ನೀಡಿದ್ದಾರೆ. ಇನ್ನಷ್ಟು ಜನರನ್ನು ಸೇರ್ಪಡೆ ಮಾಡಿದರೆ, ಹಣ ದ್ವಿಗುಣವಾಗಲಿದೆ ಎಂದು ಆಮಿಷವೊಡ್ಡಿದ್ದಾರೆ.

ಇದನ್ನು ನಂಬಿದ್ದ ಮಹಿಳೆ ಸುಮಾರು 25 ಜನರನ್ನು ಸೇರಿಸಿದ್ದರು. ಎಲ್ಲರೂ ತಮ್ಮ ಆಧಾರ್ ಕಾರ್ಡ್ ಹಾಗೂ ಪಾನ್‍ಕಾರ್ಡ್‍ಗಳನ್ನು ನೀಡಿದ್ದರು. ಈ ದಾಖಲೆಗಳನ್ನು ಉಪಯೋಗಿಸಿ ದುಷ್ಕರ್ಮಿಗಳು ಸಾಲ ಪಡೆದು ವಾಹನಗಳ ಖರೀದಿ ಮಾಡುತ್ತಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ.
ನೀವು ವಾಹನ ಖರೀದಿ ಮಾಡಿದ್ದೀರಿ, ಸಾಲದ ಕಂತು ಕಟ್ಟಬೇಕು ಎಂದು ಬ್ಯಾಂಕ್ ಸಿಬ್ಬಂದಿ ದಾಖಲೆ ನೀಡಿದವರಿಗೆ ಕರೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಮಹಿಳೆ ಪುಲಿಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News