ಪೊಲೀಸರ ಮೇಲೆ ಹಲ್ಲೆ ಪ್ರಕರಣ: ಇಂಜಿನಿಯರ್ ರೌಡಿ ಪಟ್ಟಿಗೆ?
Update: 2021-12-10 23:59 IST
ಬೆಂಗಳೂರು, ಡಿ.10: ಪೊಲೀಸರ ಮೇಲೆ ಹಲ್ಲೆ ಆರೋಪ ಪ್ರಕರಣ ಸಂಬಂಧ ಇಂಜಿನಿಯರ್ ಸೇರಿ ಇಬ್ಬರನ್ನು ಇಲ್ಲಿನ ಯಲಹಂಕ ಉಪನಗರ ಠಾಣಾ ಪೊಲೀಸರು ರೌಡಿಪಟ್ಟಿಗೆ ಸೇರಿಸಿದ್ದಾರೆ ಎಂದು ವರದಿಯಾಗಿದೆ.
ಸಾಫ್ಟ್‍ವೇರ್ ಇಂಜಿನಿಯರ್ ಮನೋಜ್ ಹಾಗೂ ಫುಡ್ ಡೆಲಿವರಿ ಕೆಲಸ ಮಾಡುವ ಧೀರಜ್‍ನನ್ನು ಪೊಲೀಸರು ರೌಡಿಪಟ್ಟಿಗೆ ಸೇರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿ.6ರ ರಾತ್ರಿ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಬೆಟ್ಟಹಳ್ಳಿ ವೃತ್ತದಲ್ಲಿ ದಾರಿ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರಾಗಿರುವ ಮನೋಜ್, ಧೀರಜ್ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿತ್ತು. ಬಳಿಕ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು ಎನ್ನಲಾಗಿದೆ. ಈ ದೂರಿನನ್ವಯ ಪೊಲೀಸರು ರೌಡಿ ಪಟ್ಟಿಗೆ ಇಬ್ಬರನ್ನು ಸೇರ್ಪಡೆಗೊಳಿಸಿ ತನಿಖೆ ಕೈಗೊಂಡಿದ್ದಾರೆ.