ಪತ್ನಿಗೆ ಕಿರುಕುಳ ಆರೋಪ: ಭದ್ರತಾ ಸಿಬ್ಬಂದಿಗೆ ಹಲ್ಲೆ
Update: 2021-12-11 17:14 IST
ಬೆಂಗಳೂರು, ಡಿ.11: ಪತ್ನಿಯನ್ನು ನಿಂದಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ವಾಸು ಎಂಬುವವರು ಭದ್ರತಾ ಸಿಬ್ಬಂದಿ ಯತೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯತೀಶ್ ಮತ್ತು ವಾಸು ಇಬ್ಬರು ದೂರು ನೀಡಿದ್ದಾರೆ.
ಯತೀಶ್, ಮಧ್ಯರಾತ್ರಿ ವೇಳೆ ವಾಟ್ಸಾಪ್ ಕರೆಮಾಡಿ ಅಶ್ಲೀಲ ಸಂದೇಶಗಳ ಮುಖಾಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.