ಸಾಮಾಜಿಕ, ಧಾರ್ಮಿಕ ಸಾಮರಸ್ಯಕ್ಕೆ ಹಾನಿ ಆರೋಪ: ಮಿರ್ಝಾಪುರ ವೆಬ್ ಸರಣಿ ನಿರ್ಮಾಪಕರ ವಿರುದ್ಧದ ಎಫ್ಐಆರ್ ರದ್ದು

Update: 2021-12-11 16:59 GMT

ಪ್ರಯಾಗರಾಜ್,ಡಿ.25: ಮಿರ್ಝಾಪುರ ವೆಬ್ ಸರಣಿ ಯಲ್ಲಿ ಉತ್ತರಪ್ರದೇಶದ ಮಿರ್ಝಾಪುರ ಜಿಲ್ಲೆಯನ್ನು ಅನುಚಿತವಾಗಿತೋರಿಸುವ ಮೂಲಕ ಧಾರ್ಮಿಕ, ಸಾಮಾಜಿಕ ಹಾಗೂ ಪ್ರಾದೇಶಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಸರಣಿಯ ನಿರ್ಮಾಪಕರ ವಿರುದ್ಧ ದಾಖಲಿಸಲಾದ ಎಫ್ಐಆರ್ ಅನ್ನು ಅಲಹಾಹಬಾದ್ ಹೈಕೋರ್ಟ್ ಶನಿವಾರ ರದ್ದುಪಡಿಸಿದೆ.

 ಮಿರ್ಝಾಪುರ ವೆಬ್ ಸರಣಿಯ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ವಿರುದ್ಧ ಎಪ್ಐಆರ್ ದಾಖಲಿಸಲಾಗಿತ್ತು. ಈ ವೆಬ್ಸರಣಿಯ ಎರಡು ಸೀಸನ್ಗಳ ಸಾಹಿತಿಗಳು ಹಾಗೂ ನಿರ್ದೇಶಕರಾದ ಕರಣ್ ಅಂಶುಮಾನ್, ಗುರುಮೀತ್ಸಿಂಗ್, ಪುನೀತ್ ಕೃಷ್ಣ ಹಾಗೂ ವಿನೀತ್ ಕೃಷ್ಣ ಅವರ ವಿರುದ್ಧ ದಾಖಲಿಸಲಾದ ಎಫ್ಐಆರ್ ಅನ್ನು ಕೂಡಾ ನ್ಯಾಯಾಲಯ ತಳ್ಳಿಹಾಕಿದೆ.

ಪ್ರಕರಣವನ್ನು ದಾಖಲಿಸಬಹುದಾದಂತಹ ಸಮರ್ಥನೀಯವಾದ ಆರೋಪಗಳು ಎಫ್ಐಆರ್ನಲ್ಲಿ ಕಂಡುಬರುತ್ತಿಲ್ಲವೆಂದು ಅಲಾಹಾಬಾದ್ ಹೈಕೋರ್ಟ್ ಅಭಿಪ್ರಾಯಿಸಿದೆ.

ಧರ್ಮ,ಜಾತಿ ಹಾಗೂ ಜನಾಂಗ ಅಥವಾ ಸಮುದಾಯಗಳ ನಡುವೆ ದ್ವೇಷಭಾವನೆಯನ್ನು ಮಿರ್ಝಾಪುರ ವೆಬ್ ಸರಣಿಯಲ್ಲಿ ಬಿತ್ತಲಾಗಿದೆಯೆಬ ಅರ್ಜಿದಾರರ ಆರೋಪಕ್ಕೆ ಆಧಾರವಿಲ್ಲ’’ ಎಂದು ನ್ಯಾಯಾಲಯ ತಿಳಿಸಿದೆ.

 ಜನವರಿ 17ರಂದು ಸಲ್ಲಿಸಲಾದ ಎಫ್ಐಆರ್ನಲ್ಲಿ ಮಿರ್ಝಾಪುರ ವೆಬ್ ಸರಣಿಯಲ್ಲಿ ಉತ್ತರಪ್ರದೇಶದ ಮಿರ್ಝಾಪುರ ಜಿಲ್ಲೆಯನ್ನು ಅಸಭ್ಯವಾಗಿ ಹಾಗೂ ಅನುಚಿತವಾದ ರೀತಿಯಲ್ಲಿ ಬಿಂಬಿಸಲಾಗಿದೆ’’ ಎಂಬುದಾಗಿ ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News