×
Ad

ಹ್ಯಾಕರ್ ಶ್ರೀಕೃಷ್ಣ ವಿರುದ್ಧ ಸಿಐಡಿಯಿಂದ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಕೆ

Update: 2021-12-17 18:09 IST

ಬೆಂಗಳೂರು, ಡಿ.17: ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ವಿರುದ್ಧ ವೆಬ್‍ಸೈಟ್ ಹ್ಯಾಕಿಂಗ್ ಪ್ರಕರಣದಲ್ಲಿ ನಗರದ ವಿಶೇಷ ಕೋರ್ಟ್‍ಗೆ ಸಿಐಡಿ ಆರೋಪಪಟ್ಟಿ ಸಲ್ಲಿಸಿದೆ. 

ಶ್ರೀಕೃಷ್ಣ ಸೇರಿ 18 ಆರೋಪಿಗಳ ವಿರುದ್ಧ 500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹಣ ವರ್ಗಾವಣೆ ಸಂಬಂಧ ದಾಖಲೆ ಕೂಡ ಲಗತ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 420, ಐಟಿ ಕಾಯ್ದೆಯ ಸೆಕ್ಷನ್ 43 ಮತ್ತು ಸೆಕ್ಷನ್ 66ರ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಶ್ರೀಕೃಷ್ಣ ಗುತ್ತಿಗೆದಾರರಾಗಿರುವ ತನ್ನ ಸ್ನೇಹಿತ ಮತ್ತು ಸಹ ಆರೋಪಿಯ ನಿರ್ದೇಶನದ ಮೇರೆಗೆ ಹ್ಯಾಕ್ ಮಾಡಿದ್ದ ಎಂದು ಉಲ್ಲೇಖಿಸಲಾಗಿದೆ ಎಂದಿದ್ದಾರೆ.

2019ರಲ್ಲಿ ಸರಕಾರದ ಇ-ಪ್ರಕ್ಯೂರ್‍ಮೆಂಟ್ ವೆಬ್‍ಸೈಟ್ ಹ್ಯಾಕ್ ಮಾಡಿ 11.55 ಕೋಟಿ ರೂ. ಕದಿಯಲಾಗಿತ್ತು. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ವೇಳೆ ಇ-ಪ್ರಕ್ಯೂರ್‍ಮೆಂಟ್ ವೆಬ್‍ಸೈಟ್ ಮಾತ್ರವಲ್ಲದೇ 3 ಬಿಟ್ ಕಾಯಿನ್ ಎಕ್ಸ್ ಚೇಂಜ್ ಏಜೆನ್ಸಿಗಳು, 10 ಪೋಕರ್ ವೆಬ್‍ಸೈಟ್‍ಗಳು ಮತ್ತು 3 ಮಾಲ್‍ವೇರ್ ಎಕ್ಸ್ ಪ್ಲೊಟೆಡ್ ಅನ್ನು ಶ್ರೀಕೃಷ್ಣ ಹ್ಯಾಕ್ ಮಾಡಿದ್ದು ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News