×
Ad

ಎಸ್‌ವೈ‌ಎಸ್ ಬೆಂಗಳೂರು ಜಿಲ್ಲೆ: ನೂತನ ಅಧ್ಯಕ್ಷರಾಗಿ ಮುಜೀಬ್ ಸಖಾಫಿ ನೇಮಕ

Update: 2021-12-18 19:34 IST
ಮುಜೀಬ್ ಸಖಾಫಿ / ಬಶೀರ್ ಸ‌ಅದಿ / ಸಲೀಂ ಜಾಲಹಳ್ಳಿ

ಬೆಂಗಳೂರು: ಸುನ್ನೀ ಯವಜನ ಸಂಘ(ಎಸ್‌ವೈ‌ಎಸ್) ಬೆಂಗಳೂರು ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಮುಜೀಬ್ ಸಖಾಫಿ ಹಲಸೂರ್ ಅವರು ಆಯ್ಕೆಯಾಗಿದ್ದಾರೆ. 

ಶನಿವಾರ ಜಿಲ್ಲಾ ಸಮಿತಿಯ ಮಹಾಸಭೆ ಮತ್ತು ನೂತನ ಸಮಿತಿ ರಚನೆ ಸಭೆ ಹಲಸೂರ್ ಮರ್ಖಿನ್ಸ್ ಸಭಾಂಗಣದಲ್ಲಿ ನಡೆಯಿತು.  ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಸಭೆಗೆ ನೇತೃತ್ವ ನೀಡಿದರು. 

ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಸ‌ಅದಿ ಪೀಣ್ಯ, ಕೋಶಾಧಿಕಾರಿಯಾಗಿ ಸಲೀಂ ಜಾಲಹಳ್ಳಿ, ಉಪಾಧ್ಯಕ್ಷರಾಗಿ ಅಬ್ದುಲ್‌ ಸತ್ತಾರ್ ಮೌಲವಿ ಡಬಲ್ ರೋಡ್ ಅವರನ್ನು ನೇಮಿಸಲಾಯಿತು. ಕಾರ್ಯದರ್ಶಿಗಳಾಗಿ ಜಾಫರ್ ನೂರಾನಿ ಮರ್ಖಿನ್ಸ್ (ದ‌ಅ್‌ವಾ) ಮುನೀರ್ ಕೆ.ಆರ್.ಪುರ (ಸಂಘಟನೆ) ಅನಸ್‌ ಸಿದ್ದೀಖಿ ಶಿವಾಜಿನಗರ (ಕಲ್ಚರಲ್), ನೆಲ್ಲೂರ್ ಇಬ್ರಾಹಿಂ ಸಖಾಫಿ (ಇಸಾಬಾ), ಇಬ್ರಾಹಿಂ ಸಖಾಫಿ ಪಯೋಟ (ಇಸಾಬಾ ಟೀಮ್ ಡೈರೆಕ್ಟರ್) ನಾಸಿರ್ ಕ್ಲಾಸಿಕ್ (ಸೋಷಿಯಲ್), ತಾಜುದ್ದೀನ್ ಫಾಳಿಲಿ (ಮೀಡಿಯಾ), ಅವರನ್ನು ಆಯ್ಕೆ ಮಾಡಲಾಯಿತು

ಕಾರ್ಯಕಾರಿ ಸದಸ್ಯರಾಗಿ ಕೆ.ಎಚ್ ಇಸ್ಮಾಯಿಲ್ ಸ‌ಅದಿ ಕಿನ್ಯ, ಶರ್ಶಾದ್ ಜಯನಗರ, ಬಶೀರ್ ಹೆಚ್ಚೆಸ್ಸಾರ್, ಅಬ್ದುಲ್‌ ರಹ್ಮಾನ್ ನೀಲಸಂದ್ರ, ಕಬೀರ್ ಪಿಪಿ ಶಿವಾಜಿ ನಗರ, ಹಂಝ ಅಲ್ಸೂರ್, ಸಯ್ಯಿದ್ ಮಸ್ತಾನ್ ಕೆ.ಆರ್.ಪುರ, ಅಬ್ದುಲ್‌ ರಝಾಖ್ ಜಾಲಿ ಮೊಹಲ್ಲಾ, ಕೆ.ಎಂ.ಅಬ್ದುಲ್‌ ಅಝೀಝ್ ಮಲ್ಲೇಶ್ವರ, ಹಾರಿಸ್ ಮದನಿ ಮೆಜೆಸ್ಟಿಕ್, ರಫೀಖ್ ಮೆಜೆಸ್ಟಿಕ್, ಸಿ.ಎಂ.ಉಮರ್ ಹಾಜಿ, ಅಶ್ ಹದ್ ಎಚ್.ಎ.ಎಲ್,ಫಿರ್ದೌಸ್ ಮಾರ್ತಹಳ್ಳಿ, ನಸೀರ್ ಹಾಜಿ ಎಚ್.ಎ.ಎಲ್, ಇಬ್ರಾಹಿಂ ಪಿಪಿ ಆರ್.ಎಂ.ಸಿ, ಹುಸೈನ್ ಸಖಾಫಿ ಯಶವಂತಪುರ, ಸ್ವಾಲಿಹ್ ಟಿಸಿ, ಝುಬೈರ್ ಮೌಲವಿ ಬೊಮ್ಮನಹಳ್ಳಿ ಅವರನ್ನು ನೇಮಕ ಮಾಡಲಾಯಿತು.

ಬೆಂಗಳೂರು ಜಿಲ್ಲಾ ಉಸ್ತುವಾರಿ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಸಭೆಯ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಇಬ್ರಾಹಿಂ ಬಾಫಖೀಹ್ ಪ್ರಾರ್ಥನೆ ನಡೆಸಿದರು. ರಾಜ್ಯಾಧ್ಯಕ್ಷ ಪಟ್ಟೋರಿ ಉಸ್ಮಾನ್ ಸ‌ಅದಿ ಉದ್ಘಾಟಿಸಿದರೆ, ರಾಜ್ಯ ಕೋಶಾಧಿಕಾರಿ ಅಬ್ದುಲ್‌ ಹಕೀಂ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯ ಕೆ‌ಎಚ್. ಇಸ್ಮಾಯಿಲ್ ಸ‌ಅದಿ ಕಿನ್ಯ ಶುಭ ಹಾರೈಸಿದರು.

ಮುಜೀಬ್ ಸಖಾಫಿ ಸ್ವಾಗತಿಸಿದರು. ಬಶೀರ್ ಸ‌ಅದಿ ಪೀಣ್ಯ ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News