×
Ad

ಆಸ್ತಿ ನೋಂದಣಿ: ಕೆ2 ಚಲನ್‌ನಲ್ಲಿ ತಪ್ಪಾಗಿ ಹಣ ಪಾವತಿಯಾದರೆ, ಮರುಪಾವತಿ ಮಾಡಲು ಮನವಿ

Update: 2021-12-18 23:04 IST

ಬೆಂಗಳೂರು: ಆಸ್ತಿ ನೋಂದಾವಣೆಗಾಗಿ ಜಾರಿಗೊಳಿಸಿರುವ ಕೆ2 ಚಲನ್ ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಆದರೆ ಮಾಹಿತಿ ತಿಳಿಯದೇ ಕೆ2 ಚಲನ್ ಮೂಲಕ ತಪ್ಪಾಗಿ ಬೇರೆ ಸರಕಾರಿ ಕಚೇರಿಗೆ ಪಾವತಿಯಾದರೆ, ಸಾರ್ವಜನಿಕರಿಗೆ ಮರು ಪಾವತಿಯಾಗುತ್ತಿಲ್ಲ. ಇದರಿಂದ ಜನರು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸಮಾಜ ಸೇವಕ ಲಕ್ಮಿ ನಾರಾಯಣ್ ತಿಳಿಸಿದ್ದಾರೆ. 

ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಆಸ್ತಿ ನೋಂದಾಯಿಸಲು ಉಪ ನೋಂದಣಿ ಕಚೇರಿಗೆ ಸ್ಟಾಂಪ್ ಶುಲ್ಕ, ನೋಂದಣಿ ಶುಲ್ಕ, ಸೆಸ್ ಹಾಗೂ ಸ್ಕ್ಯಾನಿಂಗ್ ಶುಲ್ಕವನ್ನು ಕೆ2 ಚಲನ್ ಮೂಲಕ ಸಾರ್ವಜನಿಕರು ಹಣ ಪಾವತಿ ಮಾಡುತ್ತಿದ್ದಾರೆ. ಆದರೆ ಹಣ ಪಾವತಿಯ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು. 

ನೋಂದಣಿ ಮಾಡುವಾಗ ಕಂದಾಯ ಇಲಾಖೆಯ ಬೇರೊಂದು ಕಚೇರಿಗೆ ಹಣವು ತಪ್ಪಾಗಿ ವರ್ಗಾವಣೆಯಾದಾಗ, ಗ್ರಾಹಕನ ಹೆಸರಿಗೆ ಆಸ್ತಿ ನೋಂದಣಿಯಾಗುವುದಿಲ್ಲ. ಆ ಹಣ ಯಾವುದಕ್ಕೂ ಬಳಕೆಯಾಗದೆ, ಹಾಗೆಯೇ ಉಳಿದುಕೊಂಡಿರುತ್ತದೆ. ಆದುದರಿಂದ ತಪ್ಪಾಗಿ ಪಾವತಿಯಾಗಿರುವ ಹಣವನ್ನು ಸರಕಾರವು ಹಣ ಪಾವತಿ ಮಾಡುವವರಿಗೆ ಹಿಂತಿರುಗಿಸಿಕೊಡಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು. 

ಗೋಷ್ಠಿಯಲ್ಲಿ ಶಿವಲಿಂಗ, ಮಂಜುನಾಥ್, ಕುಮಾರ್, ಸಂತೋಷ್ ಉಪಸ್ಥಿತರಿದ್ದರು.

ಬಸವನಗುಡಿಯ ಅಪಾರ್ಟ್ಮೆಂಟ್‌ನ ಫ್ಲಾಟ್‌ವೊಂದನ್ನು ಕೊಳ್ಳಲು ಬಸವನಗುಡಿಯ ಉಪನೋಂದಾಣಾಧಿಕಾರಿಗಳ ಹೆಸರಿನಲ್ಲಿ ಪಡೆಯುವ ಬದಲಾಗಿ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ಬಸವನಗುಡಿ ಹೆಸರಿನಲ್ಲಿ ಕೆ2 ಚಲನ್ ಪಡೆದುಕೊಳ್ಳಲಾಗಿದೆ. ಆದುದರಿಂದ 6,08,760ರೂ.ಗಳ ಚಲನ್ ವ್ಯರ್ಥವಾಗಿದೆ. ಕಳೆದ ಮೂರು ತಿಂಗಳಿನಿAದ ಹಣ ಮರು ಪಾವತಿ ಮಾಡವಂತೆ ಸರಕಾರದ ಕಂದಾಯ ಇಲಾಖೆ, ಖಜಾನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ಮನವಿ ಸಲ್ಲಿಸಿದರೂ ವ್ಯರ್ಥವಾಗಿದೆ. 
-ಅರಣ್ ಕುಮಾರ್ ಟಿ.ಆರ್., ಹಣ ಕಳೆದುಕೊಂಡವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News