ಲಾಕ್‍ಡೌನ್ ಸಡಿಲಿಕೆಯಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಶೇ.75ರಷ್ಟು ಏರಿಕೆ
ಬೆಂಗಳೂರು, ಡಿ.20: ರಾಜಧಾನಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಸಡಿಲಿಕೆ ಬಳಿಕ ವಾಯುಮಾಲಿನ್ಯ ಮಟ್ಟ ಶೇ.75ಕ್ಕೆ ಏರಿಕೆಯಾಗಿದೆ.
ನಗರದಲ್ಲಿ 2019-2020 ಹಾಗೂ 2020-2021ರ ಅಂಕಿ ಅಂಶಗಳ ಪ್ರಕಾರ ವಾಯುಮಾಲಿನ್ಯ ಮಟ್ಟ ಶೇ.50ರಷ್ಟಿತ್ತು. ಆದರೆ, 2021-2022ರ ಪ್ರಕಾರ ವಾಯುಮಾಲಿನ್ಯ ಮಟ್ಟ ಶೇ.75ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಪರಿಸರ ಸಚಿವಾಲಯ ಬಿಬಿಎಂಪಿಗೆ 279 ಕೋಟಿ ಕೊಟ್ಟಿದೆ. ಜತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ 2.2 ಕೋಟಿ ನೀಡಿದೆ. ಆದರೆ, ಹಣ ಬಿಡುಗಡೆಯಾದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ, ಧೂಳು ನೇರವಾಗಿ ಶ್ವಾಸಕೋಶ ಪ್ರವೇಶಿಸುತ್ತಿದ್ದು, ಜನರಿಗೆ ಉಸಿರಾಡಲು ತೊಂದರೆಯಾಗುತ್ತಿದೆ.
ಒಂದು ವೇಳೆ ಗಾಳಿಯೊಂದಿಗೆ ವಿಷಕಾರಿ ಅಂಶಗಳು ಸೇರಿದರೆ ಅದರಿಂದ ರಕ್ತ ಸಂಚಾರಕ್ಕೂ ತೊಂದರೆ ಉಂಟಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ ವಾಯುಮಾಲಿನ್ಯ ತಡೆಗಟ್ಟಲು ಬಿಬಿಎಂಪಿ ಹಲವು ವಾರ್ಡ್‍ಗಳಲ್ಲಿ ವಾಟರ್ ಸ್ಪ್ರಿಂಕ್ಲರ್, ಏರ್ ಪೊಲ್ಯೂಷನ್ ಮಶಿನ್‍ಗಳನ್ನು ಅಳವಡಿಕೆ ಮಾಡಬೇಕು. ಆದರೆ, ಇದ್ಯಾವುದನ್ನು ಬಿಬಿಎಂಪಿ ಮಾಡಿಲ್ಲ. ಈ ಅನುದಾನದ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ.