ಬೆಂಗಳೂರಿನ ಬ್ರಿಗೇಡ್ ರೋಡ್ ಅಸೋಸಿಯೇಶನ್‍ನಿಂದ ಹೊಸ ವರ್ಷ ಆಚರಣೆಗೆ ಕಡಿವಾಣ

Update: 2021-12-21 16:36 GMT
ಫೈಲ್ ಚಿತ್ರ

ಬೆಂಗಳೂರು, ಡಿ.21: ಕೊರೋನ ಹೊಸತಳಿ ಒಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಹೊಸ ವರ್ಷ ಆಚರಣೆಗೆ ಮಾಡುವುದಿಲ್ಲ ಎಂದು ಬ್ರಿಗೇಡ್ ರೋಡ್ ಅಸೋಸಿಯೇಷನ್ ಪ್ರಕಟನೆ ಹೊರಡಿಸಿದೆ. 

ನಗರದ ಬ್ರಿಗೇಡ್ ರಸ್ತೆಯು ಹೊಸ ವರ್ಷ ವೇಳೆ ಬಗೆಬಗೆಯ ವಿದ್ಯುತ್ ದೀಪಗಳಿಂದ ವಿಜೃಂಭಸುತಿತ್ತು. ಆದರೆ ಕೊರೋನ ಮಹಾಮಾರಿಯಿಂದಾಗಿ 2021ರ ಹೊಸ ವರ್ಷಕ್ಕೆ ಕಡಿವಾಣ ಹಾಕಲಾಗಿತ್ತು. ಇತ್ತೀಚಿಗೆ ನಗರದಲ್ಲಿ ಓಮೈಕ್ರಾನ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದುದರಿಂದ ಹೊಸ ವರ್ಷಾಚರಣೆಗೆ ಸರಕಾರ ಅವಕಾಶ ಕೊಟ್ಟರೂ, ಅಸೋಶಿಯೇಷನ್ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಅಸೋಸಿಯೇಷನ್ ಸ್ಪಷ್ಟಪಡಿಸಿದೆ.

ಪ್ರತಿವರ್ಷದಂತೆ ಈ ಬಾರಿ ಯಾವುದೇ ಲೈಟಿಂಗ್ ಅಥವಾ ಮತ್ತಿತರ ಅಲಂಕಾರ ಇರುವುದಿಲ್ಲ.  ಜನರು ಆರೋಗ್ಯವಾಗಿದ್ದರೆ ಮುಂದಿನ ಬಾರಿ ಹೊಸ ವರ್ಷ ಆಚರಣೆ ಮಾಡಬಹುದು. ಒಂದು ದಿನದ ಆಚರಣೆಗಿಂತ ಜೀವನವೇ ಮುಖ್ಯ ಎಂದು ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News