ಹವಾಲ ದಂಧೆ ಪ್ರಕರಣ: ಬ್ಯಾಂಕ್ ಅಕೌಂಟ್‍ಗಳಿಂದ 70 ಕೋಟಿ ರೂ.ಚಲಾವಣೆ
Update: 2021-12-23 21:49 IST
ಬೆಂಗಳೂರು, ಡಿ.23: ಬ್ಲ್ಯಾಕ್ ಅಂಡ್ ವೈಟ್ ಕೇಸ್‍ನಲ್ಲಿ ಇತ್ತೀಚೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದ ಪುಟ್ಟೇನಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈಗಾಗಲೇ ಈ ಹವಾಲ ದಂಧೆ ಶಂಕೆ ಮೇರೆಗೆ ಪೊಲೀಸರು ಐಟಿ ಮತ್ತು ಈಡಿಗೆ ಪತ್ರದ ಮುಖೇನ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದುವರೆಗೂ 800 ಬ್ಯಾಂಕ್ ಅಕೌಂಟ್‍ಗಳು 70 ಕೋಟಿ ಠೇವಣಿ ಹಣ ಚಲಾವಣೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಅಷ್ಟು ಅಕೌಂಟ್ ಫ್ರೀಜ್ ಆದರೂ ಸಹ ಇಲ್ಲಿಯವರೆಗೆ ಒಬ್ಬ ಅಕೌಂಟ್ ಹೋಲ್ಡರ್ ಮಾತ್ರ ತನ್ನ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಠಾಣೆ ಮೆಟ್ಟಿಲು ಹತ್ತಿದ್ದಾರೆ. ಇನ್ನುಳಿದವರಾರೂ ಕೂಡ ಈ ಬಗ್ಗೆ ದೂರನ್ನ ದಾಖಲಿಸದೇ ಇರುವುದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ.